ನವದೆಹಲಿ:ಭಾರತ ಕ್ರಿಕೆಟ್ ತಂಡದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ ನಗರ್ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವಿಶೇಷವೆಂದರೆ, ನವೆಂಬರ್ 23ರಂದು(ನಿನ್ನೆ) ಈ ಜೋಡಿಯ ವಿವಾಹ ವಾರ್ಷಿಕೋತ್ಸವವಾಗಿತ್ತು.
ಮೀರತ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ನ ಖಜಾಂಚಿ ರಾಕೇಶ್ ಗೋಯಲ್ ಈ ಶುಭ ಸುದ್ದಿಯನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಬುಧವಾರ ನವದೆಹಲಿಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನೂಪುರ್ ತಮ್ಮ ಮೊದಲ ಮಗುವಿಗೆ ಜನ್ಮನೀಡಿದ್ದಾರೆ.
ಇದೇ ವರ್ಷ ಮೇ 20ರಂದು ಭುವನೇಶ್ವರ್ ತಂದೆ ಕಿರಣ್‌ಪಾಲ್ ಸಿಂಗ್ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಕುಟುಂಬ ಸದಸ್ಯರು ಕೊರೊನಾ ಪಾಸಿಟಿವ್ನಿಂದ ನರಳಾಡಿದ್ದರು. ಸತತ ನೋವುಗಳನ್ನೇ ಅನುಭವಿಸಿದ್ದ ಕುಟುಂಬಕ್ಕೆ ಹೆಣ್ಣು ಮಗವಿನ ಜನನ ಮನೆಯಲ್ಲಿ ಆನಂದವನ್ನು ಮರುಕಳಿಸುವಂತೆ ಮಾಡಿದೆ.