ಲಂಡನ್: ಟೀಂ ಇಂಡಿಯಾ ಕ್ರಿಕೆಟ್ನ ಮುಖ್ಯ ಕೋಚ್ ರವಿಶಾಸ್ತ್ರಿ ಕಳೆದ ಕೆಲ ತಿಂಗಳಿಂದ ಕೊಹ್ಲಿ ಪಡೆ ಜೊತೆ ಇಂಗ್ಲೆಂಡ್ನಲ್ಲಿದ್ದು, ಇದರ ಮಧ್ಯೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿ, ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರವಿಶಾಸ್ತ್ರಿ ಮನೆಯಲ್ಲಿ ಐದು ಶ್ವಾನಗಳಿದ್ದು, ಅವುಗಳಿಗೆ ಬೌನ್ಸರ್, ಬೀಮರ್, ಫ್ಲಿಪ್ಪರ್, ಸ್ಕಿಪರ್ ಹಾಗೂ ಯಾರ್ಕರ್ ಎಂದು ಹೆಸರಿಟ್ಟಿದ್ದಾರೆ. ಅವು ಒಟ್ಟಿಗೆ ಊಟ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ಟೀಂ ಇಂಡಿಯಾ ಕೋಚ್, "Miss you guys. see you soon" ಎಂದು ಬರೆದುಕೊಂಡಿದ್ದಾರೆ.