ನವದೆಹಲಿ :ಭಾರತ, ರಾಜಸ್ಥಾನ್ ರಾಯಲ್ಸ್ ಆಲ್ರೌಂಡರ್ ರಾಹುಲ್ ತೆವಾಟಿಯಾ ತಮ್ಮ ಗೆಳತಿ ರಿಧಿ ಮಣ್ಣು ಅವರೊಂದಿಗೆ ಸೋಮವಾರ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆವಾಟಿಯಾ-ರಿಧಿ ವಿವಾಹಕ್ಕೆ ಭಾರತ ತಂಡದ ಆಟಗಾರರಾದ ಯುಜ್ವೇಂದ್ರ ಚಹಲ್, ರಿಷಭ್ ಪಂತ್, ನಿತೀಶ್ ರಾಣಾ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಹಾಜರಾಗಿದ್ದರು.
ಈ ಜೋಡಿ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇಂದು ಇವರ ವಿವಾಗದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟ್ ಅಭಿಮಾನಿಗಳು ನವದಂಪತಿಗೆ ಶುಭ ಕೋರುತ್ತಿದ್ದಾರೆ.
ರಾಹುಲ್ ತೆವಾಟಿಯಾ ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. 2020ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಶೆಲ್ಡಾನ್ ಕಾಟ್ರೆಲ್ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದಲ್ಲದೇ ರಾತ್ರೋರಾತ್ರಿ ಸ್ಟಾರ್ ಆಗಿ ಹೊರ ಹೊಮ್ಮಿದ್ದರು.
ಈ ಪ್ರದರ್ಶನದ ನಂತರ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದರೂ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ, ಕೊಹ್ಲಿ, ರೋಹಿತ್ ಅಂತಹ ಸೀನಿಯರ್ ಆಟಗಾರರ ಕೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ಆತನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಐಪಿಎಲ್ನಲ್ಲಿ 48 ಪಂದ್ಯಗಳನ್ನಾಡಿರುವ ಅವರು 32 ವಿಕೆಟ್ ಮತ್ತು 521 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಪ್ರೇಯಸಿಯೊಂದಿಗೆ ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ,ವಿಶ್ವಕಪ್ ನಂತರ ವಿವಾಹ