ನವದೆಹಲಿ:ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಮತ್ತೆ ಮೊದಲ ಸ್ಥಾನಕ್ಕೇರಿದ್ದು, ಕೋಚ್ ರವಿಶಾಸ್ತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈ ಸಾಧನೆಗೆ ಪ್ರತಿಯೊಬ್ಬ ಆಟಗಾರನ ದೃಢತೆ ಮತ್ತು ಅಚಲವಾದ ಗುರಿಯೇ ಕಾರಣ. ತಂಡಕ್ಕೆ ಅನೇಕ ಅಡೆತಡೆಗಳು ಎದುರಾದರೂ ಅವುಗಳನ್ನು ಮೆಟ್ಟಿನಿಂತು ಹುಡುಗರು ಈ ಸಾಧನೆ ಮಾಡಿದ್ದಾರೆ. ನಮ್ಮ ಬಿಂದಾಸ್ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ." ಎಂದು ತಿಳಿಸಿದ್ದಾರೆ.
24 ಪಂದ್ಯಗಳಲ್ಲಿ 2,914 ಅಂಕ ಗಳಿಸಿರುವ ಭಾರತ 121 ರೇಟಿಂಗ್ ಪಾಯಿಂಟ್ಗಳನ್ನು ಪಡೆದು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸತತ 5ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡಿದೆ. ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಟೆಸ್ಟ್ ಸರಣಿ ಸೋತ ನ್ಯೂಜಿಲ್ಯಾಂಡ್ ತಂಡ 120 ರೇಟಿಂಗ್ ಪಾಯಿಂಟ್ಗಳ ಮೂಲಕ 2ನೇ ಸ್ಥಾನದಲ್ಲಿದೆ. ಕಿವೀಸ್ ತಂಡ 18 ಟೆಸ್ಟ್ ಪಂದ್ಯಗಳಿಂದ 2,166 ಅಂಕಗಳನ್ನು ಸಂಪಾದಿಸಿದೆ.