ಕರ್ನಾಟಕ

karnataka

ETV Bharat / sports

ಟಿ20 ಕ್ರಿಕೆಟ್​ನಿಂದ 6 ತಿಂಗಳ ದಿಢೀರ್​ ಬ್ರೇಕ್ ತೆಗೆದುಕೊಂಡ ಬಾಂಗ್ಲಾದೇಶ್ ಓಪನರ್​ - ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

ಕಳೆದ ಟಿ20 ವಿಶ್ವಕಪ್​ನಿಂದಲೂ ಚುಟುಕು ಮಾದರಿಯಿಂದ ದೂರ ಉಳಿದಿದ್ದ ತಮೀಮ್​, ಇದೀಗ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ ಕಡೆ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

Tamim Iqbal takes 6-month break from T20Is
ಬಾಂಗ್ಲಾದೇಶ್ ಓಪನರ್​ ತಮೀಮ್​ ಇಕ್ಬಾಲ್​

By

Published : Jan 27, 2022, 7:25 PM IST

ಢಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟರ್​ ತಮೀಮ್ ಇಕ್ಬಾಲ್​ ಮುಂದಿನ ಆರು ತಿಂಗಳವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಿಂದ ಗುರುವಾರ ದಿಢೀರ್ ಬ್ರೇಕ್​ ತೆಗೆದುಕೊಂಡಿದ್ದಾರೆ.

ಕಳೆದ ಟಿ20 ವಿಶ್ವಕಪ್​ನಿಂದಲೂ ಚುಟುಕು ಮಾದರಿಯಿಂದ ದೂರ ಉಳಿದಿದ್ದ ತಮೀಮ್​, ಇದೀಗ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ ಕಡೆ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

"ಕಳೆದ ಎರಡು ದಿನಗಳ ಹಿಂದೆ ನಾನು ಬಿಸಿಬಿ ಅಧ್ಯಕ್ಷರು, ಸಿಎಒ ಜಲಾಲ್​ ಭಾಯ್​ ಮತ್ತು ಡೈರೆಕ್ಟರ್​​ ಕಾಜೀ ಇನಾಮ್​ ಜೊತೆಗೆ ಚರ್ಚೆ ನಡೆಸಿದ್ದೇನೆ. ಅವರು ನನ್ನನ್ನು ಟಿ20 ಕ್ರಿಕೆಟ್​ನಲ್ಲಿ ಮುಂದುವರಿಯಲು ಬಯಸಿದ್ದಾರೆ. ವಿಶೇಷವಾಗಿ ಮುಂದಿನ ಟಿ20 ವಿಶ್ವಕಪ್​ವರೆಗೆ ಟಿ20 ತ್ಯಜಿಸದಂತೆ ಮನವಿ ಮಾಡಿದ್ದಾರೆ".

ಇದನ್ನೂ ಓದಿ:RCB ಅಲ್ಲ, ಈ ತಂಡದ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ ಹರ್ಷಲ್​ ಪಟೇಲ್​

ಆದರೆ ನನ್ನ ದೃಷ್ಟಿ ವಿಭಿನ್ನವಾಗಿದೆ. ಮುಂದಿನ ಆರು ತಿಂಗಳವರೆಗೆ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದಿಲ್ಲ ಎಂದು ನಾನು ಹೇಳಬಲ್ಲೆ. ಈ ಆರು ತಿಂಗಳ ಅವಧಿಯಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತೇನೆ. ನಾವು ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2023ರ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದೇವೆ, ಆದ್ದರಿಂದ ನಾನು ಈ ಎರಡು ಸ್ವರೂಪಗಳಲ್ಲಿ ಹೆಚ್ಚಿನ ಗಮನವನ್ನು ಇರಿಸುತ್ತೇನೆ ಎಂದು ಬಿಪಿಎಲ್​ ಲೀಗ್​ ವೇಳೆ ಪತ್ರಕರ್ತರಿಗೆ ಹೇಳಿದ್ದಾರೆ.

ರಾಷ್ಟ್ರೀಯ ತಂಡದ ಪರ ಆಡುತ್ತಿರುವವರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ನಾನು ಆ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಲಭ್ಯನಿರುವುದಿಲ್ಲ. 6 ತಿಂಗಳ ನಂತರ ಪರಿಸ್ಥಿತಿಗೆ ತಕ್ಕಂತೆ ತಂಡದ ಮ್ಯಾನೇಜ್​ಮೆಂಟ್​ ಟಿ20 ವಿಶ್ವಕಪ್​ ತಂಡಕ್ಕೆ ಅಗತ್ಯ ಎಂದು ಭಾವಿಸಿದರೆ ನಾನು ಸಿದ್ಧನಿದ್ದೇನೆ ಎಂದು ತಮೀಮ್​ ತಿಳಿಸಿದ್ದಾರೆ.

ಬಾಂಗ್ಲಾದೇಶದ ಪರ ತಮೀಮ್ ಇಕ್ಬಾಲ್​ 78 ಪಂದ್ಯಗಳಿಂದ ಒಂದು ಶತಕ ಹಾಗೂ 7 ಅರ್ಧಶತಕಗಳ ಸಹಿತ 1758 ರನ್​ಗಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details