ದುಬೈ: ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕ ಪಂದ್ಯವಾಗಿರುವ ಪಂದ್ಯದಲ್ಲಿ ಕಿವೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 110 ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಇಂದಿನ ಪಂದ್ಯದಲ್ಲಿಯೂ ಕಳಪೆ ಆರಂಭ ಪಡೆಯಿತು. ಅಗ್ರಕ್ರಮಾಂಕದ ಬ್ಯಾಟರ್ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 40 ರನ್ಗಳಿಸುವಷ್ಟರಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿದ್ದ ಇಶಾನ್ ಕಿಶನ್(4), ಕನ್ನಡಿಗ ಕೆಎಲ್ ರಾಹುಲ್ (18) ಮತ್ತು ರೋಹಿತ್ ಶರ್ಮಾ(14) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ನಂತರ ಬಂದ ಕೊಹ್ಲಿ ಕೂಡ 17 ಎಸೆತಗಳನ್ನೆದುರಿಸಿ ಕೇವಲ 9 ರನ್ಗಳಿಸಿ ಇಶ್ ಸೋಧಿ ಬೌಲಿಂಗ್ನಲ್ಲಿ ಬೌಲ್ಟ್ಗೆ ಕ್ಯಾಚ್ ನೀಡಿ ಔಟಾದರು. ಪಂತ್ 12 ರನ್ಗಳಿಸಿದರೆ, ಪಾಂಡ್ಯ 23 ರನ್ಗಳಿಸಿದರು. ಇವರಿಬ್ಬರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ಇದ್ದರೆ ಹೊರೆತೂ ರನ್ಗಳಿಸಲು ಪರದಾಡಿ ವಿಕೆಟ್ ಒಪ್ಪಿಸಿದರು. ಜಡೇಜಾ 19 ಎಸೆತಗಳಲ್ಲಿ ಅಜೇಯ 26 ರನ್ಗಳಿಸಿ ತಂಡದ ಮೊತ್ತವನ್ನು 100(110)ರ ಗಢಿ ದಾಟಿಸಿದರು.
ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಸೋಧಿ 4 ಓವರ್ಗಳಲ್ಲಿ 17 ರನ್ ನೀಡಿ 2 , ಸೌಥಿ ಮತ್ತು ಆ್ಯಡಂ ಮಿಲ್ನೆ ತಲಾ ಒಂದು ವಿಕೆಟ್ ಪಡೆದರು.