ಅಡಿಲೇಡ್(ಆಸ್ಟ್ರೇಲಿಯಾ):ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಬತ್ತಳಿಕೆಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಟಿ 20 ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್ ಮಹೇಲಾ ಜಯವರ್ಧನೆ ಹೆಸರಲ್ಲಿದ್ದ ಈ ದಾಖಲೆಯನ್ನು ಪುಡಿ ಮಾಡಿದರು.
ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್ನಲ್ಲಿ 1016 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 28 ರನ್ ಗಳಿಸಿದಾಗ ಈ ದಾಖಲೆ ಮುರಿಯಿತು. ವಿರಾಟ್ ಇದಕ್ಕೂ ಮೊದಲು ಅವರು 989 ರನ್ ಗಳಿಸಿದ್ದರು.