ಕರ್ನಾಟಕ

karnataka

ETV Bharat / sports

ಭಾರತದಿಂದ ಟಿ-20 ವಿಶ್ವಕಪ್ ಟೂರ್ನಿ ಔಟ್​​​..? ಯುಎಇಗೆ ಶಿಫ್ಟ್​ ಸಾಧ್ಯತೆ

ಐಸಿಸಿ ಜೊತೆಗಿನ ಅನೌಪಚಾರಿಕ ಸಭೆಯಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸುವ ಬಿಸಿಸಿಐ 4 ವಾರಗಳ ಸಮಯಾವಕಾಶ ಕೋರಿದೆ. ಆದರೆ ಟೂರ್ನಿಯ ಆಯೋಜಕತೆಯ ಹಕ್ಕು ಉಳಿಸಿಕೊಳ್ಳಲು ಬಯಸಿದ್ದು, ಯುಎಇ ಅಥವಾ ಓಮನ್​ಗೆ ಸ್ಥಳಾಂತರ ಅಭ್ಯಂತರವಿಲ್ಲ ಎಂಬ ಭಾವನೆ ಬಿಸಿಸಿಐ ತಳೆದಿದೆ ಎಂದು ಐಸಿಸಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಭಾರತದಿಂದ ಟಿ-20 ವಿಶ್ವಕಪ್ ಟೂರ್ನಿ ಔಟ್
ಭಾರತದಿಂದ ಟಿ-20 ವಿಶ್ವಕಪ್ ಟೂರ್ನಿ ಔಟ್

By

Published : Jun 5, 2021, 10:52 PM IST

ನವದೆಹಲಿ: ಈ ಬಾರಿಯ ಟಿ-20 ವಿಶ್ವಕಪ್​ ಕ್ರಿಕೆಟ್ ಟೂರ್ನಿ ಭಾರತದಿಂದ ಶಿಫ್ಟ್ ಆಗುವ ಎಲ್ಲ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಐಸಿಸಿ ಈ ಕುರಿತಂತೆ ಬಿಸಿಸಿಐಗೆ ಅಂತಿಮ ನಿರ್ಧಾರ ತಿಳಿಸಿದ್ದು, ಯುಎಇಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುಎಇ ಮೊದಲ ಆಯ್ಕೆಯಾಗಿದ್ದರೆ. ಅಕ್ಟೋಬರ್​​ ಕೊನೆಯ ವಾರದಲ್ಲಿ ಓಮನ್​ ರಾಜಧಾನಿ ಮಸ್ಕತ್​​​, ದುಬೈ, ಶಾರ್ಜಾದಲ್ಲಿ ನಡೆಸಲಿ ಸಜ್ಜಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಐಸಿಸಿ ಜೊತೆಗಿನ ಅನೌಪಚಾರಿಕ ಸಭೆಯಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸುವ ಬಿಸಿಸಿಐ 4 ವಾರಗಳ ಸಮಯಾವಕಾಶ ಕೋರಿದೆ. ಆದರೆ, ಟೂರ್ನಿಯ ಆಯೋಜಕತೆಯ ಹಕ್ಕು ಉಳಿಸಿಕೊಳ್ಳಲು ಬಯಸಿದ್ದು, ಯುಎಇ ಅಥವಾ ಓಮನ್​ಗೆ ಸ್ಥಳಾಂತರ ಅಭ್ಯಂತರವಿಲ್ಲ ಎಂಬ ಭಾವನೆ ಬಿಸಿಸಿಐ ತಳೆದಿದೆ ಎಂದು ಐಸಿಸಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

31 ಐಪಿಎಲ್ ಪಂದ್ಯಾವಳಿಯ ಬಳಿಕ ಯುಎಇಯ ಮೂರು ಮೈದಾನಗಳು ಟಿ-20 ವಿಶ್ವಕಪ್​ಗಾಗಿ ಸಿದ್ಧಗೊಳ್ಳಲಿವೆ. ಅಕ್ಟೋಬರ್ 10 ರೊಳಗೆ ಐಪಿಎಲ್ ಮುಗಿಯುವುದಾದರೆ, ವಿಶ್ವ ಟಿ-20ಯ ಆರಂಭಿಕ ಪಂದ್ಯಗಳು ನವೆಂಬರ್​​ನಲ್ಲಿ ಆರಂಭವಾಗಬಹುದು ಎಂದಿದ್ದಾರೆ.

8 ತಂಡಗಳ ಐಪಿಎಲ್​ ಅನ್ನೇ ಸೆಪ್ಟೆಂಬರ್ ವೇಳೆಗೆ ಆಯೋಜಿಸಲು ಸಾಧ್ಯವಾಗದಿದ್ದರೆ 16 ತಂಡಗಳ ಟೂರ್ನಿಯನ್ನ ಒಂದು ತಿಂಗಳ ನಂತರ ನಡೆಸುವುದು ಹೇಗೆ ಸಾಧ್ಯ. 16 ತಿಂಗಳಲ್ಲಿ ಯಾವುದಾದರೊಂದು ತಂಡ ಸದಸ್ಯನಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಅವರ ಬದಲಿ ಆಟಗಾರನ ಆಯ್ಕೆ ಕಷ್ಟವಾಗುತ್ತದೆ. ಇದು ಐಪಿಎಲ್​ ಟೂರ್ನಿಗಿಂತಲೂ ಭಿನ್ನವಾಗಿರುತ್ತದೆ. ಅಲ್ಲದೇ ಆಟಗಾರರು ಯುಎಇಯಲ್ಲಿ ಟೂರ್ನಿ ಆಡಲು ಬಯಸುವಂತೆ ಭಾರತದಲ್ಲಿ ಬಯಸುವುದು ಅನುಮಾನವಾಗಿದೆ ಎಂದಿದ್ದಾರೆ.

ABOUT THE AUTHOR

...view details