ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್:​ ಸೆಮೀಸ್​ನಲ್ಲಿ ಸೋಲಿಲ್ಲದ ಸರದಾರ ಪಾಕ್​ಗೆ ಶಾಕ್​ ನೀಡುತ್ತಾ ಕಿವೀಸ್​? - etv bharat kannada

ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಇಂದು ಮಧ್ಯಾಹ್ನ ​ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ.

T20 World Cup Semifinals: Pakistan to play against New Zealand
ಟಿ20 ವಿಶ್ವಕಪ್:​ ಸೆಮೀಸ್​ನಲ್ಲಿ ಸೋಲಿಲ್ಲದ ಸರದಾರ ಪಾಕ್​ಗೆ ಶಾಕ್​ ನೀಡುತ್ತಾ ಕಿವೀಸ್ ​?

By

Published : Nov 9, 2022, 10:00 AM IST

ಸಿಡ್ನಿ:ಗ್ರೂಪ್-1ರಲ್ಲಿನ ಅಗ್ರ ತಂಡ ​ನ್ಯೂಜಿಲೆಂಡ್ ಹಾಗೂ ಕೊನೆಯ ಹಂತದಲ್ಲಿ ಟೂರ್ನಿಯ ಸೆಮಿಫೈನಲ್​ಗೆ ಸ್ಥಾನಗಿಟ್ಟಿಸಿಕೊಂಡ ಪಾಕಿಸ್ತಾನ ತಂಡಗಳು ಇಂದು ಟಿ20 ವಿಶ್ವಕಪ್​ ಟೂರ್ನಿಯ ಮೊದಲ ನಾಕೌಟ್​ ಪಂದ್ಯದಲ್ಲಿ ಎದುರಾಗಲಿವೆ. ಸಿಡ್ನಿ ಕ್ರಿಕೆಟ್​ ಮೈದಾನವು ಮೊದಲ ಸೆಮಿಫೈನಲ್​ ಸಮರಕ್ಕೆ ಸಿದ್ಧಗೊಂಡಿದೆ.

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯರು ಹಾಗು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿದ್ದ ನ್ಯೂಜಿಲೆಂಡ್​​​ ಸತತ 5ನೇ ಬಾರಿಗೆ ವೈಟ್​ ಬಾಲ್​ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್ ತಲುಪಿದೆ. ಇನ್ನೊಂದೆಡೆ ಟೂರ್ನಿಯಲ್ಲಿ ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ಸೋತು ಹೊರಬೀಳುವ ಆತಂಕದಲ್ಲಿದ್ದ ಪಾಕ್​, ಬಳಿಕ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಲಯಕ್ಕೆ ಮರಳಿದ್ದಲ್ಲದೆ, ಹರಿಣಗಳ ವಿರುದ್ಧ ನೆದರ್ಲೆಂಡ್ಸ್​ ಗೆದ್ದ ಕಾರಣ ಸುಲಭವಾಗಿ ಸೆಮೀಸ್​ಗೆ ತಲುಪಿತ್ತು.

ಪಾಕ್​ ತಂಡಕ್ಕೆ ಇತ್ತೀಚಿನ ಕೆಲ ವರ್ಷಗಳಿಂದ ಬ್ಯಾಟಿಂಗ್​ ಬೆನ್ನೆಲುಬಾಗಿರುವ ಆರಂಭಿಕರು ಈ ಟೂರ್ನಿಯಲ್ಲಿ ತಿಣುಕಾಡುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್​ ರಿಜ್ವಾನ್ ಅಸ್ಥಿರ ಪ್ರದರ್ಶನ ತೋರಿದ್ದಾರೆ. ಆಲ್​ರೌಂಡರ್​ಗಳಾದ ಶದಾಬ್ ಖಾನ್, ಇಫ್ತಿಕಾರ್ ಅಹಮದ್ ಹಾಗೂ ಶಾನ್ ಮಸೂದ್ ಮೇಲೆ ಪಾಕ್​ ಅವಲಂಬಿತವಾಗಿತ್ತು.

ನ್ಯೂಜಿಲೆಂಡ್​ ತಂಡದಲ್ಲಿ ಆರಂಭಿಕ ಫಿನ್ ಅಲೆನ್ ಸ್ಫೋಟಕ ಆರಂಭಿಕರಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ ಆಧಾರ ಸ್ತಂಭವಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಾಯಕ ವಿಲಿಯಮ್ಸನ್ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್ ಮತ್ತು ಜಿಮ್ಮಿ ನೀಶಂ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್‌, ಟಿಮ್ ಸೌಥಿ, ಲೂಕಿ ಫರ್ಗ್ಯುಸನ್ ವೇಗದ ಬೌಲಿಂಗ್ ನಿಭಾಯಿಸಿದರೆ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಸ್ಪಿನ್​ ದಾಳಿ ನಡೆಸಲು ಸಜ್ಜಾಗಿದ್ದಾರೆ. ಪಾಕ್ ತಂಡದಲ್ಲಿರುವ ಶಹೀನ್ ಶಾ ಆಫ್ರಿದಿ, ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಹಾ ಕೂಡ ಕಿವೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಡುಗಿಸುವ ಸಮರ್ಥರಾಗಿದ್ದಾರೆ.

ಸೆಮಿಫೈನಲ್​ಗಳಲ್ಲಿ ಪಾಕ್​ ಸೋತಿಲ್ಲ:ನ್ಯೂಜಿಲೆಂಡ್ ಎದುರು ಈ ಹಿಂದಿನ ಮುಖಾಮುಖಿಗಳಲ್ಲಿ ಪಾಕ್‌ ತಂಡ ಪ್ರಾಬಲ್ಯ ಸಾಧಿಸಿದೆ. 1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕ್ ಎದುರು ಕಿವೀಸ್ ಸೋತಿದೆ. ಬಳಿಕ 1992, 1999ರಲ್ಲಿನ ಸೆಮಿಫೈನಲ್‌ ಪಂದ್ಯಗಳಲ್ಲೂ ಪಾಕಿಸ್ತಾನವು ಬ್ಲ್ಯಾಕ್​ ಕ್ಯಾಪ್ಸ್​ ವಿರುದ್ಧ ಮೇಲುಗೈ ಸಾಧಿಸಿತ್ತು. ತದನಂತರ 2007ರ ಟಿ20 ವಿಶ್ವಕಪ್​ನಲ್ಲೂ ಸಹ ಸೆಮೀಸ್​ನಲ್ಲಿ ಕಿವೀಸ್ ಎದುರು ಪಾಕಿಸ್ತಾನ ಜಯ ಕಂಡಿತ್ತು. ಈ ಗೆಲುವಿನ ದಾಖಲೆಯನ್ನು ಪಾಕಿಸ್ತಾನ ಮುಂದುವರೆಸುವ ವಿಶ್ವಾಸದಲ್ಲಿದೆ.

ತಂಡಗಳು: ನ್ಯೂಜಿಲೆಂಡ್:ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೆ, ಫಿನ್ ಅಲೆನ್ (ವಿಕೆಟ್‌ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆ್ಯಡಂ ಮಿಲ್ನೆ, ಈಶ್ ಸೋಧಿ, ಲಾಕಿ ಫರ್ಗ್ಯುಸನ್, ಟಿಮ್ ಸೌಥಿ, ಡೆರ್ಲ್ ಮಿಚೆಲ್, ಜೇಮ್ಸ್‌ ನೀಶಮ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪಮನ್, ಮಿಚೆಲ್ ಬ್ರೇಸ್‌ವೆಲ್, ಮಾರ್ಟಿನ್ ಗಪ್ಟಿಲ್

ಪಾಕಿಸ್ತಾನ:ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕಾರ್ ಅಹಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ನಸೀಮ್ ಶಹಾ, ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್, ಶಾನ್ ಮಸೂದ್, ಮೊಹಮ್ಮದ್ ಹಸನೈನ್, ಆಸಿಫ್ ಅಲಿ, ಹೈದರ್ ಅಲಿ, ಖುಷ್‌ದಿಲ್ ಶಹಾ

ಟಿ20 ಕ್ರಿಕೆಟ್‌ನಲ್ಲಿ ಬಲಾಬಲ:

  • ಪಂದ್ಯ: 28
  • ಪಾಕಿಸ್ತಾನ ಜಯ: 17
  • ನ್ಯೂಜಿಲೆಂಡ್ ಜಯ: 11
  1. ಪಂದ್ಯ ಆರಂಭ: ಮಧ್ಯಾಹ್ನ 1.30 ಗಂಟೆ (ಭಾರತೀಯ ಕಾಲಮಾನ)
  2. ಮೈದಾನ: ಸಿಡ್ನಿ ಕ್ರಿಕೆಟ್​ ಗ್ರೌಂಡ್​​

ಇದನ್ನೂ ಓದಿ:ಟಿ20 ವಿಶ್ವಕಪ್: ಎಬಿಡಿ ಪ್ರಕಾರ, ಫೈನಲ್‌ಗೆ ಈ ಎರಡು ಟೀಂ, ಗೆಲ್ಲೋದು ಮಾತ್ರ ಇವರೇ!

ABOUT THE AUTHOR

...view details