ಸಿಡ್ನಿ:ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಸಿಡ್ನಿ ಕ್ರಿಕೆಟ್ ಮೈದಾನವು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದು, ರೋಚಕ ಹಣಾಹಣಿಯ ನಿರೀಕ್ಷೆ ಇದೆ.
ಟೂರ್ನಿಯ ಗ್ರೂಪ್-1ರಲ್ಲಿನ ಅಗ್ರ ತಂಡವಾಗಿ ನ್ಯೂಜಿಲೆಂಡ್ ಸೆಮೀಸ್ಗೆ ತಲುಪಿದ್ದರೆ, ಇನ್ನೊಂದೆಡೆ ಪಾಕಿಸ್ತಾನವು ಸೂಪರ್ -12 ಹಂತದ ಅಂತಿಮ ದಿನ ಗ್ರೂಪ್-2ರಲ್ಲಿ 2ನೇ ಸ್ಥಾನ ಪಡೆದು ಈ ಹಂತಕ್ಕೆ ದಾಪುಗಾಲಿಟ್ಟಿದೆ.
ಸೆಮಿಫೈನಲ್ಗಳಲ್ಲಿ ಪಾಕ್ ಸೋತಿಲ್ಲ:ನ್ಯೂಜಿಲೆಂಡ್ ಎದುರು ಈ ಹಿಂದಿನ ಸೆಮಿಫೈನಲ್ ಮುಖಾಮುಖಿಗಳಲ್ಲಿ ಪಾಕ್ ತಂಡ ಪ್ರಾಬಲ್ಯ ಸಾಧಿಸಿದೆ. 1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕ್ ಎದುರು ಕಿವೀಸ್ ಸೋತಿದೆ. ಬಳಿಕ 1992, 1999ರಲ್ಲಿನ ಸೆಮಿಫೈನಲ್ ಪಂದ್ಯಗಳಲ್ಲೂ ಪಾಕಿಸ್ತಾನವು ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಮೇಲುಗೈ ಸಾಧಿಸಿತ್ತು. ತದನಂತರ 2007ರ ಟಿ20 ವಿಶ್ವಕಪ್ನಲ್ಲೂ ಸಹ ಸೆಮೀಸ್ನಲ್ಲಿ ಕಿವೀಸ್ ಎದುರು ಪಾಕಿಸ್ತಾನ ಜಯ ಕಂಡಿತ್ತು. ಈ ಗೆಲುವಿನ ದಾಖಲೆಯನ್ನು ಪಾಕಿಸ್ತಾನ ಮುಂದುವರೆಸುವ ವಿಶ್ವಾಸದಲ್ಲಿದೆ.