ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ತಯಾರಿ: ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಮುಂದೋಳಿಗೆ ಗಾಯ - ಭಾರತ ಮತ್ತು ಇಂಗ್ಲೆಂಡ್‌ ನಡುವೆ ಸೆಮಿಫೈನಲ್ ಪಂದ್ಯ

ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್ ಸಮೀಪಿಸುತ್ತಿದ್ದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.

T20 World Cup semi final  india vs england semi final  Rohit Sharma Sustains Forearm Injury  India Captain Rohit Sharma  ಟಿ20 ವಿಶ್ವಕಪ್‌ ಸೆಮಿಫೈನಲ್‌  ಭಾರತ ಮತ್ತು ಇಂಗ್ಲೆಂಡ್‌ ನಡುವೆ ಸೆಮಿಫೈನಲ್ ಪಂದ್ಯ  ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯ  ನೆಟ್‌ ಪ್ರಾಕ್ಟಿಸ್‌ನಲ್ಲಿ ನಿರತರಾಗಿದ್ದ ಟೀಂ ಇಂಡಿಯಾ  ರೋಹಿತ್ ಶರ್ಮಾ ಅವರ ಮುಂದೋಳಿಗೆ ಗಾಯ  ಭಾರತ ಮತ್ತು ಇಂಗ್ಲೆಂಡ್‌ ನಡುವೆ ಸೆಮಿಫೈನಲ್ ಪಂದ್ಯ  ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್
ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಮುಂದೋಳಿಗೆ ಗಾಯ

By

Published : Nov 8, 2022, 9:14 AM IST

ಅಡಿಲೇಡ್(ಆಸ್ಟ್ರೇಲಿಯಾ): ಇಂದು ಬೆಳಗ್ಗೆ ಅಡಿಲೇಡ್‌ನಲ್ಲಿ ನೆಟ್‌ ಪ್ರಾಕ್ಟಿಸ್‌ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮುಂದೋಳಿಗೆ ಗಾಯವಾಗಿದೆ. ಗುರುವಾರ ಭಾರತ ಮತ್ತು ಇಂಗ್ಲೆಂಡ್‌ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಘಟನೆ ಆತಂಕ ಮೂಡಿಸಿದೆ.

ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಮುಂದೋಳಿಗೆ ಗಾಯ

ಭಾರತ ತಂಡದ ನೆಟ್ ಪ್ರಾಕ್ಟಿಸ್‌ ಸಂದರ್ಭದಲ್ಲಿ ಎಸ್ ರಘು ಅವರಿಂದ ರೋಹಿತ್ ಶರ್ಮಾ ಥ್ರೋಡೌನ್‌ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಶಾರ್ಟ್‌ ಬಾಲ್ ರೋಹಿತ್ ಅವರ ಬಲ ಮುಂದೋಳಿಗೆ ಅಪ್ಪಳಿಸಿದೆ. ವಿಪರೀತ ನೋವಿನಿಂದ ಬಳಲಿದ ಅವರು ತಕ್ಷಣವೇ ನೆಟ್ಸ್ ತೊರೆದರು. ರೋಹಿತ್ ಶರ್ಮಾ 18 ಯಾರ್ಡ್‌ ದೂರದಿಂದ 150 ಕ್ಕೂ ಹೆಚ್ಚು ವೇಗದ ಎಸೆತಗಳನ್ನು ಎದುರಿಸುತ್ತಿದ್ದರು. ಈ ಪೈಕಿ ಒಂದು ಎಸೆತವನ್ನು ಕನೆಕ್ಟ್‌ ಮಾಡಲು ಸಾಧ್ಯವಾಗದ ಕಾರಣಕ್ಕೆ ಅದು ಅವರ ಮುಂದೋಳಿಗೆ ಜೋರಾಗಿ ಅಪ್ಪಳಿಸಿದೆ.

ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಮುಂದೋಳಿಗೆ ಗಾಯ

ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್‌ ಬಾಕ್ಸ್‌ ಕಟ್ಟಿದ್ದು, ದೂರದಲ್ಲಿ ಕುಳಿತು ಅವರು ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಅವರು ಹೆಚ್ಚು ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತಂಡದ ಮಾನಸಿಕ ಆರೈಕೆ ತಜ್ಞರು, ರೋಹಿತ್‌ ಬಳಿ ಬಂದು ಮಾತನಾಡುತ್ತಿದ್ದರು. ಟಿ20 ವಿಶ್ವಕಪ್‌ನ ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಇನ್ನೇನು 48 ಗಂಟೆಗಳಷ್ಟೇ ಬಾಕಿ ಉಳಿದಿದೆ. ವೈದ್ಯಕೀಯ ತಂಡ ರೋಹಿತ್‌ ಅವರ ಮೇಲೆ ತೀವ್ರ ನಿಗಾವಹಿಸಲಿದೆ. ಒಂದು ವೇಳೆ ಕೈ ಮೂಳೆ ಮುರಿತ ಸಂಭವಿಸಿದ್ದೇ ಅದಲ್ಲಿ ಅವರು ಸೆಮಿಫೈನಲ್‌ ಆಡುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಮುಂದೋಳಿಗೆ ಗಾಯ

ಮತ್ತೆ ಬ್ಯಾಟ್‌ ಹಿಡಿದು ಅಭ್ಯಾಸ ಶುರು ಮಾಡಿದ ರೋಹಿತ್: ಇದೀಗ ಬಂದ ಮಾಹಿತಿಯಂತೆ, ರೋಹಿತ್‌ ಶರ್ಮಾ ನೆಟ್‌ ಪ್ರಾಕ್ಟಿಸ್‌ಗೆ ಮರಳಿದ್ದಾರೆ. ವೈದ್ಯಕೀಯ ಸಿಬ್ಬಂದಿಯಿಂದ ಶುಶ್ರೂಷೆ ಹಾಗು ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಅವರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ ಆರೋಪ: ಕ್ರಿಕೆಟ್​ನಿಂದ ಗುಣತಿಲಕಗೆ ಲಂಕಾ ಕ್ರಿಕೆಟ್​ ಮಂಡಳಿ ನಿಷೇಧ

ABOUT THE AUTHOR

...view details