ಅಡಿಲೇಡ್ (ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಫೈನಲ್ ಕನಸು ಭಗ್ನವಾಗಿದೆ. ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಹಿತ್ ಶರ್ಮಾ ಪಡೆ ಹೀನಾಯ ಸೋಲು ಕಂಡಿದೆ. 10 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದ ಬಟ್ಲರ್ ಪಡೆ ಫೈನಲ್ಗೆ ಲಗ್ಗೆ ಇಟ್ಟಿದೆ.
ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 168 ರನ್ಗಳನ್ನು ಗಳಿಸಿತ್ತು. ಈ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆಟಗಾರರು ವಿಕೆಟ್ ನಷ್ಟವಿಲ್ಲದೇ ಕೇವಲ 16 ಓವರ್ಗಳಲ್ಲಿ 170 ರನ್ ಸಿಡಿಸಿ ಜಯ ದಾಖಲಿಸಿದರು. ನಾಯಕ ಜೋಸ್ ಬಟ್ಲರ್ (80) ಮತ್ತು ಅಲೆಕ್ಸ್ ಹೇಲ್ಸ್ (86 ರನ್) ಅಜೇಯ ಆಟವಾಡಿ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ಆರಂಭಿಕರಾಗಿ ವಿರಾಟ್ ಕೊಹ್ಲಿ ಜೊತೆಗೆ ಕಣಕ್ಕೆ ಇಳಿದ್ದ ಕೆಎಲ್ ರಾಹುಲ್ ಬೇಗ ಔಟಾಗಿ ನಿರಾಶೆ ಮೂಡಿಸಿದ್ದರು. 5 ಬಾಲ್ಗಳನ್ನು ಎದುರಿಸಿ ಕೇವಲ 5 ರನ್ಗಳನ್ನಷ್ಟೇ ಗಳಿಸಿ ರಾಹುಲ್ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದರು.
ಮೂರನೇ ಕ್ರಮದಲ್ಲಿ ಕ್ರೀಸ್ಗೆ ಬಂದ ನಾಯಕ ರೋಹಿತ್ ಶರ್ಮಾ, ವಿರಾಟ್ ಜೊತೆಗೂಡಿ ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತುವ ಯತ್ನ ಮಾಡಿದ್ದರು. ತಂಡದ ಮೊತ್ತ 59 ರನ್ಗಳಾಗಿದ್ದಾಗ 27 ರನ್ ಗಳಿಸಿದ್ದ ರೋಹಿತ್, ಕ್ರಿಸ್ ಜೋರ್ಡಾನ್ ಬೌಲಿಂಗ್ನಲ್ಲಿ ಓಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.