ಹೈದರಾಬಾದ್:14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು, ಫೈನಲ್ ಪಂದ್ಯ ಮಾತ್ರವೇ ಈಗ ಬಾಕಿಯಿದೆ. ಈ ಹಬ್ಬ ಕೊನೆಗೊಳ್ಳುತ್ತಿದ್ದಂತೆ ಟಿ-20 ವಿಶ್ವಕಪ್ ಆರಂಭಗೊಳ್ಳುತ್ತಿದ್ದು ಕ್ರಿಕೆಟ್ ಅಭಿಮಾನಿಗಳ ಗಮನ ಈಗ ಚುಟುಕು ಮಹಾಸಮರದತ್ತ ನೆಟ್ಟಿದೆ.
ಇದೇ ತಿಂಗಳ 17ರಿಂದ ಬಹುನಿರೀಕ್ಷಿತ ಟಿ-20 ವಿಶ್ವಕಪ್ಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ಮುಖಾಮುಖಿಯಾಗಿವೆ. ಹಾಗಾಗಿ ಸಹಜವಾಗಿ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇದರ ನಡುವೆ ಮೌಕಾ ಮೌಕಾ ಎಂಬ ಜಾಹೀರಾತು ಸಹ ಜಾಲತಾಣದಲ್ಲಿ ಸಕಷ್ಟು ವೈರಲ್ ಆಗಿದ್ದು ಅಭಿಮಾನಿಗಳ ಜೋಶ್ ದ್ವಿಗುಣಗೊಳಿಸಿದೆ.
ಆ ಜಾಹೀರಾತು ಯಾವುದು?
ಕ್ರಿಕೆಟ್ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಲು ಟಿ-20 ವಿಶ್ವಕಪ್ ವೇಳಾಪಟ್ಟಿಯ ಪ್ರಸಾರಕರು ಮೌಕಾ ಮೌಕಾ ಜಾಹೀರಾತನ್ನು ರಚಿಸಿದ್ದಾರೆ. ಇದು ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಡುವೆ ನಡೆಯುವ ಕಾಳಗದ ದ್ಯೋತಕವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕಷ್ಟು ವೈರಲ್ ಆಗಿದೆ.
ಮುಂಬರುವ ವಿಶ್ವಕಪ್ ಪಂದ್ಯಗಳನ್ನು ನೋಡಲು ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬ ಹೊಸ ಟಿವಿ ಖರೀದಿಸಲು ದುಬೈನ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬರುತ್ತಾನೆ. ಅಲ್ಲಿದ್ದ ಟಿವಿ ಶೋರಂ ಮಾಲೀಕರೊಂದಿಗೆ ಮಾತನಾಡುತ್ತಾ 'ನಿಮಗೆ ಗೊತ್ತಾ ಈ ಬಾರಿ ಪಾಕಿಸ್ತಾನ ತಂಡವು ಬಾಬರ್ ಅಜಂ ಮತ್ತು ರಿಜ್ವಾನ್ ಅವರಂತಹ ಆಟಗಾರರನ್ನು ಹೊಂದಿದೆ. ಹಾಗಾಗಿ ಈ ಸಾರಿ ಭಾರತವನ್ನು ಅವರು (ಪಾಕಿಸ್ತಾನ) ಸಲೀಸಾಗಿ ಸೋಲಿಸಬಲ್ಲರು ಎಂದು ಪಾಕ್ ಆಟಗಾರರ ಶೌರ್ಯ ಹೊಗಳುತ್ತಾರೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಶೋರೂಂ ಮಾಲೀಕರು ಎರಡು ಟಿವಿಗಳನ್ನು ತೋರಿಸುತ್ತಾ ಒಂದು ಟಿವಿಯನ್ನು ಖರೀದಿ ಮಾಡಿದರೆ ಮತ್ತೊಂದು ಟಿವಿಯನ್ನು ಉಚಿತವಾಗಿ ನೀಡಲಾಗುತ್ತದೆ. ಏಕೆಂದರೆ ಪಾಕ್ ಸೋತರೆ ಒಂದು ಟಿವಿ ಒಡೆದು ಹೊಗಬಹುದು ಮತ್ತೊಂದು ನಿಮ್ಮ ಬಳಿ ಇಟ್ಟುಕೊಳ್ಳಬಹುದು ಎಂದು ಭಾರತ ತಂಡವು ಪಾಕ್ ಮೇಲೆ ನಡೆಸಿದ ಪಾರಮ್ಯದ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಜಾಹೀರಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಇತಿಹಾಸದ ಜಾಹೀರಾತು:
ಕ್ರಿಕೆಟ್ ಪ್ರೇಕ್ಷಕರನ್ನು ರಂಜಿಸಲು ಸ್ಟಾರ್ ಸ್ಪೋರ್ಟ್ ಪ್ರತಿ ಇಂತಹ ಆಕರ್ಷಕ ಜಾಹೀರಾತು ಕೊಡುತ್ತಿರುತ್ತದೆ. ಈ ಸಾರಿಯೂ ಸಹ ಅಂತಹದ್ದೇ ಮನರಂಜನೆ ನೀಡುವ ಜಾಹೀರಾತು ಪ್ರಸಾರ ಮಾಡುತ್ತಿದೆ. ಪಾಕಿಸ್ತಾನ ತಂಡ ಈ ವರ್ಷವಾದರೂ ಭಾರತದ ವಿರುದ್ಧ ಗೆಲ್ಲುತ್ತದೆಯೇ? ಎಂಬ ಕಾನ್ಸೆಪ್ಟ್ ಅನ್ನು ಮುಂದಿಟ್ಟುಕೊಂಡು ಈ ಜಾಹೀರಾತು ನಿರ್ಮಾಣವಾಗಿದೆ.
ಪಾಕ್ ಮೇಲೆ ಪಾರಮ್ಯ:
ಏಕದಿನ ಮತ್ತು ಟಿ20 ಎರಡರಲ್ಲೂ ಈವರೆಗೆ ಪಾಕಿಸ್ತಾನ ಭಾರತದ ವಿರುದ್ಧ ಗೆದ್ದಿಲ್ಲ. ಸತತ ಐದು ಐಸಿಸಿ ಟಿ-20 ವಿಶ್ವಕಪ್ ಮುಖಾಮುಖಿಯಲ್ಲಿ ಟೀಂ ಇಂಡಿಯಾ ಉತ್ತಮ ಆಟದ ಮೂಲಕ ಗೆಲುವು ದಾಖಲಿಸಿದೆ. 2007 ಟಿ-20 ವಿಶ್ವಕಪ್‌ನಲ್ಲಿ ಎರಡು ಬಾರಿ, ನಂತರ 2012, 2014, ಮತ್ತು 2016 ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಸಾಮಾನ್ಯವಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ, ಕೊಹ್ಲಿ ಸೇನೆ ತನ್ನ ಬಹುಕಾಲದ ಪ್ರತಿಸ್ಪರ್ಧಿ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇದನ್ನೂ ಓದಿ: T-20 ವಿಶ್ವಕಪ್: ಒಂದೇ ಗಂಟೆಯಲ್ಲಿ ಭಾರತ - ಪಾಕ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್!