ಮೆಲ್ಬರ್ನ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನ ಸೂಪರ್ 12 ಹಂತದ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಭಾರತ 159 ರನ್ಗೆ ಕಟ್ಟಿಹಾಕಿತು. ಆರಂಭದಿಂದಲೇ ಪಾಕ್ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ ಬಹುನಿರೀಕ್ಷೆಯ ಪಂದ್ಯದಲ್ಲಿ ಘನತೆಗೆ ತಕ್ಕ ಆಟವಾಡಿತು. ಯುವ ವೇಗಿ ಅರ್ಷದೀಪ್ ಸಿಂಗ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾರ ಮಾರಕ ಬೌಲಿಂಗ್ ದಾಳಿಯಿಂದ ಪಾಕ್ ತಂಡವನ್ನು ಪುಡಿಗಟ್ಟಿತು.
ಭಾರತಕ್ಕೆ ಕನಸಿನ ಆರಂಭ:ಪಾಕ್ ತಂಡದ ಆಧಾರ ಸ್ತಂಭಗಳಾದ ನಾಯಕ ಬಾಬರ್ ಅಜಂ ಮತ್ತು ಮೊಹಮದ್ ರಿಜ್ವಾನ್ರನ್ನು ಬೇಗನೇ ಔಟ್ ಮಾಡಿದ ಭಾರತ ಕನಸಿನ ಆರಂಭ ಪಡೆಯಿತು. ಇನ್ನಿಂಗ್ಸ್ನ 2 ನೇ ಓವರ್ನ ಮೊದಲ ಎಸೆತದಲ್ಲಿಯೇ ಬಾಬರ್ ಅಜಂರನ್ನು ಅರ್ಷದೀಪ್ ಸಿಂಗ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಪಾಕ್ ನಾಯಕ ಸೊನ್ನೆಗೆ ಔಟಾದರು. ಬಳಿಕ ಹೊಡಿಬಡಿ ಆಟಗಾರ ಮೊಹಮದ್ ರಿಜ್ವಾನ್ 4 ರನ್ಗೆ ಪಂಜಾಬ್ ವೇಗಿಗೆ ವಿಕೆಟ್ ಒಪ್ಪಿಸಿದರು.
ಮಸೂದ್, ಅಹ್ಮದ್ ಹೋರಾಟ:ತಂಡ ದಿಢೀರ್ ಕುಸಿತಕ್ಕೆ ಒಳಗಾಗುವ ಭೀತಿಯಲ್ಲಿದ್ದ ತಂಡವನ್ನು ಶಾನ್ ಮಸೂದ್ ಮತ್ತು ಇಫ್ತಿಖಾರ್ ಅಹ್ಮದ್ ತಡೆದರು. ಉತ್ತಮ ಬ್ಯಾಟ್ ಬೀಸಿದ ಇಬ್ಬರು ಅರ್ಧಶತಕ ಗಳಿಸಿದರು. ಮಸೂದ್ ನಿಧಾನಗತಿಯ ಬ್ಯಾಟ್ ಮಾಡಿ ಔಟಾಗದೇ 52 ರನ್ ಗಳಿಸಿದರು.