ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್: ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ದಾಖಲೆ ಬರೆದ ಐರ್ಲೆಂಡ್ ಬೌಲರ್

ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ಯಾಂಫರ್, ನೆದರ್ಲೆಂಡ್ಸ್​ನ ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಸತತ 4 ಎಸೆತಗಳಲ್ಲಿ ನಾಲ್ಕು ಬ್ಯಾಟರ್​ಗಳಿಗೆ ಪೆವಿಲಿಯನ್​ ದಾರಿ ತೋರಿಸಿದರು. 2ನೇ ಎಸೆತದಲ್ಲಿ ಕಾಲಿನ್ ಅಕರ್ಮನ್​(11), 3ನೇ ಎಸೆತದಲ್ಲಿ ರಯಾನ್ ಔಟ್​ ಆದರು.

http://10.10.50.85:6060///finalout4/karnataka-nle/finalout/18-October-2021/13387052_curtis.jpg
ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ದಾಖಲೆ ಬರೆದ ಐರ್ಲೆಂಡ್ ಬೌಲರ್

By

Published : Oct 18, 2021, 5:13 PM IST

ಅಬುಧಾಬಿ: ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಐರ್ಲೆಂಡ್​ ತಂಡದ ವೇಗಿ ಕರ್ಟಿಸ್ ಕ್ಯಾಂಫರ್​ ಸತತ ನಾಲ್ಕು ಬಾಲಿಗೆ ನಾಲ್ಕು ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ಯಾಂಫರ್, ನೆದರ್ಲೆಂಡ್ಸ್​ನ ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಸತತ 4 ಎಸೆತಗಳಲ್ಲಿ ನಾಲ್ಕು ಬ್ಯಾಟರ್​ಗಳಿಗೆ ಪೆವಿಲಿಯನ್​ ದಾರಿ ತೋರಿಸಿದರು. 2ನೇ ಎಸೆತದಲ್ಲಿ ಕಾಲಿನ್ ಅಕರ್ಮನ್​(11), 3ನೇ ಎಸೆತದಲ್ಲಿ ರಯಾನ್ ಔಟ್​ ಆಗಿದ್ದಾರೆ.

ಟೆನ್ ಡೋಶೇಟ್(0) 4ನೇ ಎಸೆತದಲ್ಲಿ ಸ್ಕಾಟ್​ ಎಡ್ವರ್ಡ್ಸ್​(0) ಮತ್ತು 5ನೇ ಎಸೆತದಲ್ಲಿ ವಾನ್ ಡರ್​ ಮರ್ವೆ(0) ವಿಕೆಟ್​ ಪಡೆದರು. ಅಕರ್ಮನ್ ಮತ್ತು ಮರ್ವೆ ಕ್ಯಾಚ್​ ನೀಡಿ ಔಟಾದರೆ, ಡೋಶೇಟ್​ ಮತ್ತು ಎಡ್ವರ್ಡ್ಸ್​ ಎಲ್​ಬಿ ಬಲೆಗೆ ಬಿದ್ದರು.

ಐರಿಸ್ ವೇಗಿಗೂ ಮುನ್ನ ಅಫ್ಘಾನಿಸ್ತಾನದ ರಶೀದ್​ ಖಾನ್​ 2019ರಲ್ಲಿ ಐರ್ಲೆಂಡ್ ವಿರುದ್ಧ, ಲಸಿತ್ ಮಾಲಿಂಗ 2021ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್​ ಪಡೆದಿದ್ದರು. ಇನ್ನು ಒಟ್ಟಾರೆ ಟಿ-20 ಕ್ರಿಕೆಟ್​ನಲ್ಲಿ ನೋಡುವುದಾದರೆ ಇದು 8ನೇ ನಿದರ್ಶನವಾಗಿದೆ. ಆ್ಯಂಡ್ರೆ ರಸೆಲ್, ಜೇಮ್ಸ್ ಅಲೆಂಬಿ, ಅಲ್ ಅಮಿನ್ ಹೊಸೇನ್,ಅಭಿಮನ್ಯು ಮಿಥುನ್, ಶಹೀನ್ ಅಫ್ರಿದಿ, ಕರ್ಟಿಸ್ ಕ್ಯಾಂಫೆರ್​ ಕೂಡ ಈ ಸಾಧನೆ ಮಾಡಿದ್ದಾರೆ.

ಇದನ್ನು ಓದಿ:ಸೋತ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಶಕಿಬ್ ಅಲ್ ಹಸನ್

ABOUT THE AUTHOR

...view details