ಮೆಲ್ಬರ್ನ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನಲ್ಲಿಂದುಇಂಗ್ಲೆಂಡ್ ಎದುರು ಐರ್ಲೆಂಡ್ ಡಿಎಲ್ಎಸ್ ನಿಯಮದಂತೆ 5 ರನ್ಗಳ ಗೆಲುವು ಸಾಧಿಸಿತು. ಇಂಗ್ಲೆಂಡ್ 14.3 ಓವರ್ಗೆ 5 ವಿಕೆಟ್ ನಷ್ಟಕ್ಕೆ 105 ರನ್ಗಳಿಸಿತ್ತು. ಈ ಸಂದರ್ಭದಲ್ಲಿ ಮಳೆ ಸುರಿದಿದ್ದು ಪಂದ್ಯವನ್ನು ನಿಲ್ಲಿಸಲಾಗಿದೆ. ಇಷ್ಟೇ ಓವರ್ ಆಗಿದ್ದಾಗ ಐರ್ಲೆಂಡ್ 125ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು.
ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ್ದ ಐರ್ಲೆಂಡ್ ತಂಡ ಆಂಡ್ರ್ಯೂ ಬಾಲ್ಬಿರ್ನಿ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ಗೆ 158 ರನ್ಗಳ ಗುರಿ ನೀಡಿದೆ. ಈ ಗುರಿ ಬೆನ್ನತ್ತಿದ ಆಂಗ್ಲರಿಗೆ ಆರಂಭಿಕ ಆಘಾತ ಉಂಟಾಯಿತು. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನಾಯಕ ಬಟ್ಲರ್ ಸೊನ್ನೆ ಸುತ್ತಿದರು.
ಡೇವಿಡ್ ಮಲಾನ್(35) ಮತ್ತು ಹೆನ್ರಿ ಬ್ರೂಕ್ಸ್(18) ಐರ್ಲೆಂಡ್ ಎದುರು ಕೊಂಚ ಸೆಣಸಾಟ ನಡೆಸಿದರು. ಆರಂಭಿಕ ಅಲೆಕ್ಸ್ ಹೇಲ್ಸ್ (7) ಮತ್ತು ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಬೇಕಿದ್ದ ಬ್ಯಾಟರ್ ಬೆನ್ ಸ್ಟೋಕ್ಸ್ (6) ವೈಫಲ್ಯ ಅನುಭವಿಸಿದರು. ಸರಣಿ ವಿಕೆಟ್ ಪತನದಿಂದಾಗಿ ಇಂಗ್ಲೆಂಡ್ನ ರನ್ ರೇಟ್ ಕುಸಿತ ಕಾಣುತ್ತಾ ಸಾಗಿತು. ಆರನೇ ಬ್ಯಾಟರ್ ಮೊಯಿನ್ ಅಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಇವರಿಗೆ ಸಾಥ್ ನೀಡಲು ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಕ್ರೀಸ್ಗಿಳಿದರು. ಆದರೆ ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ಮೊಟಕುಗೊಂಡ ಕಾರಣ ಐರ್ಲೆಂಡ್ ಅನಿರೀಕ್ಷಿತ ಗೆಲುವು ಪಡೆಯಿತು.
ಜೋಶುವಾ ಲಿಟಲ್ 2 ವಿಕೆಟ್ ಮತ್ತು ಬ್ಯಾರಿ ಮೆಕಾರ್ಥಿ, ಫಿಯಾನ್ ಹ್ಯಾಂಡ್ ಮತ್ತು ಜಾರ್ಜ್ ಡಾಕ್ರೆಲ್ ತಲಾ ಒಂದು ವಿಕೆಟ್ ಪಡೆದರು. ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 62ರನ್ನ ಕೊಡುಗೆ ನೀಡಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:T20 World Cup: ಐರ್ಲೆಂಡ್ ವಿರುದ್ಧ157 ರನ್ಗಳ ಸ್ಪರ್ಧಾತ್ಮಕ ಸ್ಕೋರ್ ಮಾಡಿದ ಇಂಗ್ಲೆಂಡ್