ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ತಮ್ಮ ಕ್ರಿಕೆಟ್ ಬದುಕಿನಲ್ಲೇ ಅಮೋಘ ಫಾರ್ಮ್‌ನಲ್ಲಿದ್ದಾರೆ. ಲೀಲಾಜಾಲವಾಗಿ ಬ್ಯಾಟ್ ಬೀಸಿ ಎದುರಾಳಿ ಬೌಲರ್‌ಗಳನ್ನು ದಂಡಿಸುವ ರೀತಿಯೇ ಇದಕ್ಕೆ ಸಾಕ್ಷಿ. ಇದಕ್ಕೊಂದು ಹೊಸ ನಿದರ್ಶನ ನಿನ್ನೆ ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯ.
ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾದ ಈ ಬಲಗೈ ಆಟಗಾರ ಕ್ರೀಸ್ ಕಚ್ಚಿ ನಿಂತರು ಎಂದರೆ ಪ್ರತಿಸ್ಪರ್ಧಿ ತಂಡದ ಜಂಘಾಬಲ ಉಡುಗುವುದಂತೂ ನಿಶ್ಚಿತ ಎನ್ನಲೇಬೇಕು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಾಗ ಸೂರ್ಯಕುಮಾರ್ ಯಾದವ್ ಮೇಲೆ ಅಂಥ ನಿರೀಕ್ಷೆಗಳೇನೂ ಇರಲಿಲ್ಲ. ಆದ್ರೆ ಅಂಗಣಕ್ಕಿಳಿದವರೇ ಅಭಿಮಾನಿಗಳಿಗೆ ತಮ್ಮ ಬ್ಯಾಟಿಂಗ್ ವೈಖರಿಯ ಮೂಲಕ ರಸದೌತಣ ನೀಡಿದರು. ಅದರಲ್ಲೂ ಅವರು ಬಾರಿಸಿದ ಒಂದು ಹೊಡೆತವಂತೂ ಕ್ರಿಕೆಟ್ ಪ್ರಿಯರನ್ನು ಅಕ್ಷರಶ: ಹುಚ್ಚೆಬ್ಬಿಸಿತು. ಈ ಆಕರ್ಷಕ ಸಿಕ್ಸರ್ ನೋಡಿ.