ಮೆಲ್ಬೋರ್ನ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ಗೆ ಹೊಸ ಬಾಸ್ ಆಗುವ ಫೈನಲ್ ಪಂದ್ಯದಲ್ಲಿ ಬಿಗುವಿನ ಆಟವಾಡಿದ ಇಂಗ್ಲೆಂಡ್, ಅದೃಷ್ಟದ ಮೂಲಕ ಅಂತಿಮ ಸುತ್ತಿಗೆ ಬಂದಿರುವ ಪಾಕಿಸ್ತಾನವನ್ನು 8 ವಿಕೆಟ್ಗೆ 137 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಇಂಗ್ಲೆಂಡ್ನ ಡೆತ್ಓವರ್ ಸ್ಪೆಷಲಿಸ್ಟ್, ಸ್ಟಾರ್ ಬೌಲರ್ ಸ್ಯಾಮ್ ಕರ್ರನ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ಬಲೆಗೆ ಬಿದ್ದ ಪಾಕಿಸ್ತಾನ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು.
ಆಂಗ್ಲರ ದಾಳಿಗೆ ಪಾಕಿಸ್ತಾನ ಬೆಂಡು:ಆಲ್ರೌಂಡರ್ಗಳ ದಂಡನ್ನೇ ಹೊಂದಿರುವ ಇಂಗ್ಲೆಂಡ್ ಈ ಬಾರಿಯ ವಿಶ್ವಕಪ್ನ ಅತ್ಯಂತ ಬಲಿಷ್ಠ ತಂಡವಾಗಿದೆ. ಸೆಮಿಫೈನಲ್ನಲ್ಲಿ ಭಾರತ ನೀಡಿದ ಗುರಿಯನ್ನು ವಿಕೆಟ್ ನಷ್ಟವಿಲ್ಲದೇ ಮುಟ್ಟಿದಾಗಲೇ ತಂಡ ವಿಶ್ವಕಪ್ ಗೆದ್ದ ಖುಷಿಯಲ್ಲಿತ್ತು. ಅದೇ ಅಲೆಯಲ್ಲಿ ಕಣಕ್ಕಿಳಿದ ಇಂಗ್ಲೆಂಡ್, ಪಾಕಿಸ್ತಾನವನ್ನು ಯಾವ ಹಂತದಲ್ಲೂ ಬೆಳೆಯದಂತೆ ಅದುಮಿ ಹಾಕಿತು.
ತಂಡದ ಸ್ಟಾರ್ ಬ್ಯಾಟರ್ಗಳಾದ ಮೊಹಮದ್ ರಿಜ್ವಾನ್, ನಾಯಕ ಬಾಬರ್ ಆಜಂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ರಿಜ್ವಾನ್ 15 ರನ್ ಗಳಿಸಿದ್ದಾಗ ಸ್ಯಾಮ್ ಕರ್ರನ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಮೊಹಮದ್ ಹ್ಯಾರೀಸ್ 8 ರನ್ಗೆ ಆದಿಲ್ ರಸೀದ್ ಸ್ಪಿನ್ ದಾಳಿಗೆ ಬಿದ್ದರು. ಇಫ್ತಿಕಾರ್ ಅಹ್ಮದ್ಗೆ "ಸ್ಟೋಕ್ಸ್" ಹೊಡೆದು ಸೊನ್ನೆ ಸುತ್ತಿದರು.