ಕರ್ನಾಟಕ

karnataka

ETV Bharat / sports

T20 World Cup: ಬದಲಾಗುತ್ತಾ ಭಾರತದ ವಿಶ್ವಕಪ್ ಟೀಂ? ಬಿಸಿಸಿಐ ನಡೆ ಬಗ್ಗೆ ಕುತೂಹಲ

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ ಪ್ರದರ್ಶನದ ಆಧಾರದ ಮೇಲೆ ಕೆಲವು ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಲು ಆಯ್ಕೆ ಸಮಿತಿ ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಬದಲಾವಣೆಗೆ ಮುಂದಾದರೆ ಟೀಂ ಇಂಡಿಯಾದಲ್ಲಿ ಅಚ್ಚರಿಯ ಹೆಸರು ಸೇರಿಕೊಳ್ಳಲಿವೆ.

t20-world-cup-bcci-have-5-more-days-to-make-changes-to-the-squad
ಬಿಸಿಸಿಐ ಮುಂದಿದೆ ಆಟಗಾರರ ಪಟ್ಟಿ

By

Published : Oct 11, 2021, 12:47 PM IST

ನವದೆಹಲಿ: ಮುಂಬರುವ ಅಕ್ಟೋಬರ್‌ 17ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಭರದ ಸಿದ್ಧತೆ ನಡೆಯುತ್ತಿದೆ. ಯುಎಇ ಮತ್ತು ಓಮನ್‌ನಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು, ಕೆಲವು ಆಟಗಾರರು ಈಗಾಗಲೇ ಅರಬ್ ನಾಡಿಗೆ ತಲುಪಿದ್ದಾರೆ.

ವಿಶ್ವಕಪ್ ಟೂರ್ನಿಗೆ ಬಲಿಷ್ಟ ಭಾರತೀಯ ತಂಡ ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಸಮಿತಿ, ತಂಡದಲ್ಲಿ ಬದಲಾವಣೆಗೆ ಮುಂದಾಗಲಿದೆ ಎನ್ನಲಾಗಿದೆ. ತಂಡದಲ್ಲಿ ಬದಲಾವಣೆಗೆ ಅ.15ರ ವರೆಗೂ ಐಸಿಸಿ ಸಮಯ ನೀಡಿದ್ದು ಕೆಲ ಆಟಗಾರರು ಹೊಸದಾಗಿ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಆದರೆ ವಿಶ್ವಕಪ್​ಗೆ ಕ್ವಾಲಿಫೈ ಆಗಬೇಕಾದ ತಂಡಗಳು ಮಾತ್ರ ತಮ್ಮ ತಂಡವನ್ನು ಅ.10ರ ಒಳಗೆ ಅಂತಿಮಗೊಳಿಸಲು ಸೂಚಿಸಲಾಗಿದೆ. ಈ ನಡುವೆ ಭಾರತ ತಂಡದ ಆಯ್ಕೆ ಸಮಿತಿಯು ಸಹ ಕೆಲ ಬದಲಾವಣೆ ಮುಂದಾಗಿದೆ.

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ ಪ್ರದರ್ಶನದ ಆಧಾರದ ಮೇಲೆ ಕೆಲವು ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಲು ಆಯ್ಕೆ ಸಮಿತಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಬಹುಮುಖ್ಯವಾಗಿ ಆರ್​ಸಿಬಿಯ ಯಜುವೇಂದ್ರ ಚಾಹಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ನ ಶಿಖರ್ ಧವನ್ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗ್ತಿದೆ.

ಈ ಮೊದಲು ದೀಪಕ್ ಚಾಹರ್ ಮತ್ತು ಶಾರ್ದುಲ್ ಠಾಕೂರ್ ಇಬ್ಬರನ್ನು ಮೀಸಲು ಆಟಗಾರರನ್ನಾಗಿ ಹೆಸರಿಸಿದೆ. ಆದರೆ ಐಪಿಎಲ್ ದ್ವಿತೀಯಾರ್ಧದಲ್ಲಿ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯರ ಆಯ್ಕೆಯ ಬಗ್ಗೆ ಅನುಮಾನವಿದ್ದು, ತಂಡದಿಂದ ಹೊರಬರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ವರುಣ್​ ಚಕ್ರವರ್ತಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಫಿಟ್​​ನೆಸ್​ ಮೇಲೆ ನಿಗಾ ಇರಿಸಲಾಗಿದ್ದು, ತಂಡದಲ್ಲಿ ಗಾಯಾಳುಗಳಿಲ್ಲದಿದ್ದರೆ ಯಾವುದೇ ಬದಲಾಣೆಯಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಂಭಾವ್ಯ ಟೀ20 ವಿಶ್ವಕಪ್‌ ತಂಡ ಹೀಗಿದೆ:

ವಿರಾಟ್ ಕೊಹ್ಲಿ (ನಾ), ರೋಹಿತ್ ಶರ್ಮಾ (ಉ.ನಾ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್​.ಅಶ್ವಿನ್, ಭುವನೇಶ್ವರ್ ಕುಮಾರ್, ರಾಹುಲ್ ಚಾಹರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಅಕ್ಸರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಹಾಗು ಇಶಾನ್ ಕಿಶನ್.

ಸ್ಟ್ಯಾಂಡ್​​​ಬೈ ಪ್ಲೇಯರ್ಸ್​: ಶ್ರೇಯಸ್ ಐಯ್ಯರ್, ಶಾರ್ದುಲ್ ಠಾಕೂರ್, ದೀಪಕ್ ಚಾಹರ್

ABOUT THE AUTHOR

...view details