ಸಿಡ್ನಿ:ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿರಿಲೆ ರುಸ್ಸೋ ಅಬ್ಬರದ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶಕ್ಕೆ 206 ರನ್ಗಳ ಬೃಹತ್ ಗೆಲುವಿನ ಗುರಿ ನೀಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 12 ಹಂತದ ಗ್ರೂಪ್ 2 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ತೆಂಬಾ ಬವುಮಾ 2 ರನ್ಗೆ ವಿಕೆಟ್ ಒಪ್ಪಿಸಿದರೂ ಕೂಡ, ಬಳಿಕ ರುಸ್ಸೋ ಹಾಗೂ ಡಿ ಕಾಕ್ ಅಬ್ಬರದ ಜೊತೆಯಾಟವಾಡಿ ಬಾಂಗ್ಲಾ ಬೌಲರ್ಗಳ ಬೆವರಿಳಿಸಿದರು.
ಇಬ್ಬರೂ ಎಡಗೈ ಬ್ಯಾಟರ್ಗಳು 2ನೇ ವಿಕೆಟ್ಗೆ 168 ರನ್ಗಳ ಅಮೋಘ ಜೊತೆಯಾಟವಾಡಿದರು. ಬಾಂಗ್ಲಾದೇಶದ ಬೌಲರ್ಗಳ ಮೇಲೆ ದಂಡೆತ್ತಿ ಹೋದ ರುಸ್ಸೋ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್ ಬಾರಿಸಿದರೆ, ಡಿ ಕಾಕ್ 38 ಬಾಲ್ಗಳಲ್ಲಿ 63 ರನ್ ಚಚ್ಚಿದರು.