ಅಡಿಲೇಡ್ (ಆಸ್ಟ್ರೇಲಿಯಾ):ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಭಾರಿ ಪೈಪೋಟಿ ನೀಡಿ 4 ರನ್ಗಳಿಂದ ಸೋಲು ಕಂಡಿದೆ. 168 ರನ್ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆಟಗಾರರು ಕೊನೆಯ ಓವರ್ನವರೆಗೂ ಗೆಲುವಿಗೆ ಹೋರಾಟ ನಡೆಸಿದರು.
ಅಫ್ಘಾನಿಸ್ತಾನ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ಗಳನ್ನು ಪೇರಿಸಿತು. ಈ ಗೆಲುವಿನ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ತೆಗೆದುಕೊಂಡು ಹೋದರು.
ಕೊನೆಯ ಓವರ್ನಲ್ಲಿ ಅಫ್ಘಾನಿಸ್ತಾನ ಗೆಲುವಿಗೆ 22 ರನ್ಗಳ ಅವಶ್ಯಕತೆ ಇತ್ತು. ಮೊದಲ 4 ಎಸೆತಗಳಲ್ಲಿ ರಶೀದ್ ಖಾನ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕಕ್ಕೆ ತಿರುಗಿಸಿದರು. ಕೊನೆಯ 2 ಎಸೆತಗಳಲ್ಲಿ ಗೆಲುವಿಗೆ 12 ರನ್ಗಳು ಬೇಕಾಗಿದ್ದವು. ಆದರೆ, 5ನೇ ಎಸತೆದಲ್ಲಿ 2 ರನ್ ಮತ್ತು ಪಂದ್ಯದ ಕೊನೆ ಬಾಲ್ನಲ್ಲಿ ಬೌಂಡರಿ ಬಾರಿಸಿದರೂ ಸೋಲೊಪ್ಪಿಕೊಳ್ಳಬೇಕಾಗಿತ್ತು.