ಸಿಡ್ನಿ:ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ ವಿರುದ್ಧ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ.
ವಿಶ್ವಕಪ್ ಟೂರ್ನಿಯ 12ನೇ ಹಾಗೂ ಸೂಪರ್ 12 ಹಂತದ ಗ್ರೂಪ್ ಒಂದರಲ್ಲಿನ ಮೊದಲ ಪಂದ್ಯ ಇದಾಗಿದೆ. 2021ರ ಚಾಂಪಿಯನ್ ಆಸೀಸ್ ತಂಡ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಹೋರಾಡಲಿದೆ. ಇನ್ನೊಂದೆಡೆ ಕಳೆದ ಬಾರಿ ಫೈನಲ್ ಪ್ರವೇಶಿಸಿ ನಿರಾಸೆ ಹೊಂದಿದ್ದ ವಿಲಿಯಮ್ಸನ್ ಪಡೆ ಟೂರ್ನಿ ಗೆಲ್ಲುವ ಫೆವರಿಟ್ ತಂಡಗಳಲ್ಲಿ ಒಂದಾಗಿದೆ. ಎರಡೂ ತಂಡಗಳ ನಡುವೆ ರೋಚಕ ಹಣಾಹಣಿಯ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿದೆ.