ದುಬೈ:ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭುಜದ ನೋವಿನಿಂದಾಗಿ ಸ್ಕ್ಯಾನ್ಗೊಳಪಟ್ಟಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಫಿಟ್ ಆಗಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ.
ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯಾ ಭುಜದ ನೋವಿಗೊಳಗಾಗಿದ್ದ ಕಾರಣ ತಕ್ಷಣವೇ ಸ್ಕ್ಯಾನ್ಗೊಳಪಟ್ಟಿದ್ದರು. ಅವರ ಗಾಯದ ಸ್ವರೂಪದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ, ಪರಿಶೀಲನೆ ನಡೆಸಲು ಸ್ಕ್ಯಾನ್ಗೆ ಒಳಪಟ್ಟಿದ್ದರು ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿತ್ತು. ಇದೀಗ ಅದರ ರಿಪೋರ್ಟ್ ಬಂದಿದೆ. ಯಾವುದೇ ರೀತಿಯ ನೋವು ಕಾಣಿಸಿಕೊಂಡಿಲ್ಲವಾದರಿಂದ ಮುಂದಿನ ಪಂದ್ಯಕ್ಕೆ ಲಭ್ಯವಿದ್ದಾರೆಂದು ಬಿಸಿಸಿಐ ಮಾಹಿತಿ ತಿಳಿಸಿದೆ.