ದುಬೈ : ಐಸಿಸಿ ಟಿ-20 ವಿಶ್ವಕಪ್ 2021ರ ಭಾಗವಹಿಸುವ ತಂಡಗಳ ನಡುವೆ ಒಟ್ಟು 16 ಅಭ್ಯಾಸ ಪಂದ್ಯಗಳು ನಡೆಯಲಿವೆ. ಅಬುಧಾಬಿ ಮತ್ತು ದುಬೈನಲ್ಲಿ ನಡೆಯುವ ಈ ಎಲ್ಲ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಟೂರ್ನಿಗೆ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದೆ.
ಭಾರತವು ಅಕ್ಟೋಬರ್ 18ರಂದು ದುಬೈನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 20ರಂದು ದುಬೈನಲ್ಲಿ ಅಭ್ಯಾಸ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ತಂಡವು ಭಾರತವಲ್ಲದೆ, ನ್ಯೂಜಿಲ್ಯಾಂಡ್ ವಿರುದ್ಧವೂ ಕೂಡ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಅದರಂತೆ ಆಸ್ಟ್ರೇಲಿಯಾವು ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ನ್ನು ಎದುರಿಸಲಿದೆ.