ಕರ್ನಾಟಕ

karnataka

ETV Bharat / sports

ವಿಶ್ವಕಪ್​​ ಗೆಲ್ಲಲು ಭಾರತ ನೆಚ್ಚಿನ ತಂಡ, ಕನ್ನಡಿಗ ರಾಹುಲ್​ ಟಾಪ್​​ ಸ್ಕೋರರ್​ ಎಂದ ಬ್ರೆಟ್​ ಲೀ - ವಿಶ್ವಕಪ್​​ ಗೆಲ್ಲಲು ಭಾರತ ನೆಚ್ಚಿನ ತಂಡ

ಟಿ-20 ವಿಶ್ವಕಪ್​ ಗೆಲ್ಲಲು ಭಾರತ ನೆಚ್ಚಿನ ತಂಡವಾಗಿದೆ ಎಂದು ಈಗಾಗಲೇ ಅನೇಕ ಮಾಜಿ ಕ್ರಿಕೆಟ್​​ ಪ್ಲೇಯರ್ಸ್ ಅಭಿಪ್ರಾಯಪಟ್ಟಿದ್ದು, ಸದ್ಯ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್​ ಲೀ ಕೂಡ ವಿರಾಟ್​ ಪಡೆ ಪರ ಬ್ಯಾಟ್​ ಬೀಸಿದ್ದಾರೆ.

Brett Lee
Brett Lee

By

Published : Oct 21, 2021, 5:37 PM IST

ದುಬೈ:ಐಸಿಸಿ ಟಿ-20 ವಿಶ್ವಕಪ್​ ಮಹಾಸಮರ ಪ್ರಾರಂಭಗೊಂಡಿದ್ದು, ಈಗಾಗಲೇ ಸೂಪರ್​​-12 ಹಂತದ ಪಂದ್ಯಗಳು ನಡೆಯುತ್ತಿವೆ. ಇದರ ಮಧ್ಯೆ ಅನೇಕ ಮಾಜಿ ಕ್ರಿಕೆಟರ್ಸ್​​ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್​ ಬ್ರೆಟ್​​ ಲೀ ಕೂಡ ತಮ್ಮ ಮನದಾಳ ಹೊರಹಾಕಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಕನ್ನಡಿಗ ಕೆ.ಎಲ್​ ರಾಹುಲ್​ ಟಾಪ್​ ಸ್ಕೋರರ್​​ ಆಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಜೊತೆಗೆ ವೇಗಿ ಮೊಹಮ್ಮದ್ ಶಮಿ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ​ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ

ಟೀಂ ಇಂಡಿಯಾದಲ್ಲಿ ಟಾಪ್​​ ಫೈವ್​ ಬ್ಯಾಟರ್​ ಹಾಗೂ ಬೌಲರ್​ಗಳು ಉತ್ತಮ ಲಯದಲ್ಲಿದ್ದು, ಕೆಎಲ್​ ರಾಹುಲ್​ ಅತಿ ಹೆಚ್ಚು ಸ್ಕೋರ್ ಹಾಗೂ ಶಮಿ ಟೂರ್ನಿಯಲ್ಲಿ ಹೆಚ್ಚು ವಿಕೆಟ್​ ಪಡೆದುಕೊಳ್ಳಲಿದ್ದಾರೆ. ವಿರಾಟ್​ ಪಡೆ ಆಡುವ ಎಲ್ಲ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದುಕೊಂಡರೆ ಖಂಡಿತವಾಗಿ ವಿಶ್ವಕಪ್​ ಗೆಲ್ಲುವ ಫೆವರೀಟ್​ ತಂಡಗಳಲ್ಲಿ ಮುಂಚೂಣಿಯಲ್ಲಿರಲಿದೆ ಎಂದಿದ್ದಾರೆ.

ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತದ ಆಟಗಾರರು

ಇದನ್ನೂ ಓದಿರಿ:ವಿಶ್ವಕಪ್​ ಗೆಲ್ಲಲು ಭಾರತವೇ ಫೆವರೀಟ್​ ತಂಡ​, UAE ಕಂಡೀಷನ್ ಅವರಿಗೆ ಸೂಕ್ತವಾಗಿದೆ: ಇಂಜಮಾಮ್

ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದ ಬ್ರೆಟ್​ ಲೀ

ಇದೇ ವೇಳೆ, ಆಸ್ಟ್ರೇಲಿಯಾ ಪರ ಬ್ಯಾಟ್​ ಬೀಸಿರುವ ಮಾಜಿ ವೇಗದ ಬೌಲರ್​, ಕಾಂಗರೂ ಪಡೆ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಡೇವಿಡ್ ವಾರ್ನರ್​ ಹಾಗೂ ಮಿಚೆಲ್​​ ಸ್ಟಾರ್ಕ್​​ ಉತ್ತಮ ಆರಂಭ ಪಡೆದುಕೊಳ್ಳಬೇಕಾಗಿದೆ ಎಂದರು.

ಟಿ-20 ವಿಶ್ವಕಪ್​ನಲ್ಲಿ ಭಾರತ ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭ ಮಾಡಲಿದ್ದು, ಆಸ್ಟ್ರೇಲಿಯಾ ತಂಡ ಅಕ್ಟೋಬರ್​ 23ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ABOUT THE AUTHOR

...view details