ಕರ್ನಾಟಕ

karnataka

ETV Bharat / sports

ಸತತ 3ನೇ ಬಾರಿ ಟಿ20 ವಿಶ್ವಕಪ್‌​ ಎತ್ತಿ ಹಿಡಿದ ಭಾರತ ಅಂಧರ ಕ್ರಿಕೆಟ್‌ ತಂಡ - ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ

ಮೊದಲು ಬ್ಯಾಟ್ ಮಾಡಲು ಕಣಕ್ಕಿಳಿದ ಭಾರತ ತಂಡ 20 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 277 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

India's blind team won the T20 World Cup
ಟಿ20 ವಿಶ್ವಕಪ್‌​ ಗೆದ್ದ ಭಾರತದ ಅಂಧರ ತಂಡ

By

Published : Dec 18, 2022, 10:37 AM IST

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 120 ರನ್‌ಗಳ ಬೃಹತ್ ಅಂತರದಿಂದ ಬಾಂಗ್ಲಾದೇಶ ವಿರುದ್ಧ ಜಯಭೇರಿ ಬಾರಿಸಿತು. ಈ ಮೂಲಕ ಸತತ ಮೂರನೇ ಬಾರಿಗೆ ಚುಟುಕು ವಿಶ್ವಕಪ್‌ ಮುಡಿಗೇರಿಸಿಕೊಂಡಿತು.

ಭಾರತ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಮತ್ತು ಸುನೀಲ್ ರಮೇಶ್ ಅವರ ಭರ್ಜರಿ ಶತಕಗಳು ತಂಡ ಗೆಲ್ಲುವಲ್ಲಿ ಪ್ರಧಾನ ಪಾತ್ರವಹಿಸಿತು. ರಮೇಶ್ 63 ಎಸೆತಗಳಲ್ಲಿ 136 ರನ್ ಸಿಡಿಸಿದ್ದು, ಇದರಲ್ಲಿ 24 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು. ಇನ್ನು, ರೆಡ್ಡಿ 50 ಎಸೆತಗಳಲ್ಲಿ (18 ಬೌಂಡರಿ ಮತ್ತು 4 ಸಿಕ್ಸರ್‌) 100 ರನ್ ಪೇರಿಸಿದರು. ಭಾರತ ನೀಡಿದ 277 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಬಾಂಗ್ಲಾ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಾಂಗ್ಲಾ ಬ್ಯಾಟರ್ ಸಲ್ಮಾನ್ ಔಟಾಗದೆ 77 ರನ್ ಗಳಿಸಿದ್ದು ಫಲ ನೀಡಲಿಲ್ಲ.

ಇದನ್ನೂ ಓದಿ:ಸ್ಪೇನ್ ಮಣಿಸಿ ಹಾಕಿ ನೇಷನ್ಸ್​ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್​ಗೆ ಅರ್ಹತೆ

ABOUT THE AUTHOR

...view details