ಕರ್ನಾಟಕ

karnataka

ETV Bharat / sports

ಪಂದ್ಯ ಗೆಲ್ಲಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿದ್ರೆ ಮಾತ್ರೆ ಕೊಡಿ: ಪಾಕ್​ ತಂಡಕ್ಕೆ ಅಖ್ತರ್​ ಸಲಹೆ - ದುಬೈ ಇಂಟರ್​ನ್ಯಾಷನಲ್​​ ಕ್ರಿಡಾಂಗಣ

2019ರ ಏಕದಿನ ವಿಶ್ವಕಪ್ ಬಳಿಕ ಎರಡು ವರ್ಷಗಳ ನಂತರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿಂದೆ ಟಿ-20 ವಿಶ್ವಕಪ್​ಗಳಲ್ಲಿ ಒಟ್ಟು ಐದು ಬಾರಿ ಉಭಯ ತಂಡಗಳ ನಡುವೆ ಪೈಪೋಟಿ​ ನಡೆದಿದ್ದು, ಐದು ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಆರನೇ ಪಂದ್ಯದಲ್ಲಿ ಕೂಡ ಟೀಮ್​ ಇಂಡಿಯಾ ಗೆಲ್ಲುವ ವಿಶ್ವಾಸದಲ್ಲಿದೆ.

shoaib akhtar
shoaib akhtar

By

Published : Oct 24, 2021, 3:39 PM IST

ನವದೆಹಲಿ: ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ದಿನವಾದ ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ. ಇಂದು ಸಂಜೆ 7.30ಕ್ಕೆ ದುಬೈ ಇಂಟರ್​ನ್ಯಾಷನಲ್​​ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಅಂದಹಾಗೆ ಏಕದಿನ ವಿಶ್ವಕಪ್‌ ಆಗಲಿ, ಟಿ-20 ವಿಶ್ವಕಪ್‌ ಆಗಲಿ ಭಾರತ ತಂಡ ಈವರೆಗೆ ಪಾಕಿಸ್ತಾನ ವಿರುದ್ಧ ಒಂದು ಪಂದ್ಯದಲ್ಲೂ ಸೋತ್ತಿಲ್ಲ. ಟಿ-20 ವಿಶ್ವಕಪ್‌ ಒಂದರಲ್ಲೇ ಈವರೆಗೆ 5 ಬಾರಿ ಭಾರತ ತಂಡವು ಪಾಕ್‌ಗೆ ಮಣ್ಣು ಮುಕ್ಕಿಸಿದ್ದು, ಈಗ ಆರನೇ ಬಾರಿ ಗೆದ್ದು ಬೀಗುವ ಫೇವರಿಟ್‌ ತಂಡವಾಗಿ ಕಣಕ್ಕಿಳಿಯಲಿದೆ.

ಹೀಗಾಗಿ ಪಾಕ್​ ತಂಡದ ಮಾಜಿ ಆಟಗಾರ ಶೋಯಬ್​ ಅಖ್ತರ್​​ ಪಾಕ್​​ ತಂಡಕ್ಕೆ ಮೂರು ತರ್ಲೆ ಸಲಹೆಗಳನ್ನು ನೀಡಿದ್ದಾರೆ. ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯದ ಬಗ್ಗೆ ಅಖ್ತರ್‌ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

"ಮೊದಲಿಗೆ ಭಾರತ ತಂಡದ ಆಟಗಾರರಿಗೆ ನಿದ್ರೆ ಮಾತ್ರೆ ಕೊಡಿ. ಎರಡನೇಯದಾಗಿ ವಿರಾಟ್‌ ಕೊಹ್ಲಿ ಅವರನ್ನು 2 ದಿನ ಇನ್‌ಸ್ಟಾಗ್ರಾಮ್‌ ಬಳಕೆ ಮಾಡದಂತೆ ತಡೆಯಿರಿ. ಮೂರನೇಯದಾಗಿ ಎಂಎಸ್‌ ಧೋನಿ ಬ್ಯಾಟಿಂಗ್‌ಗೆ ಬರದಂತೆ ನೋಡಿಕೊಳ್ಳಿ. ಏಕೆಂದರೆ ಅವರು ಈಗಲೂ ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ," ಎಂದು ಅಖ್ತರ್‌ ತಮಾಷೆ ಮಾಡಿದ್ದಾರೆ.

ಹಿಂದಿನ 5 ಪಂದ್ಯದಲ್ಲೂ ಭಾರತಕ್ಕೆ ಜಯ:

2019ರ ಏಕದಿನ ವಿಶ್ವಕಪ್ ಬಳಿಕ ಎರಡು ವರ್ಷಗಳ ನಂತರ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿಂದೆ ಟಿ-20 ವಿಶ್ವಕಪ್​ಗಳಲ್ಲಿ ಒಟ್ಟು ಐದು ಬಾರಿ ಉಭಯ ತಂಡಗಳ ನಡುವೆ ಪೈಪೋಟಿ​ ನಡೆದಿದ್ದು, ಐದು ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಆರನೇ ಪಂದ್ಯದಲ್ಲಿ ಕೂಡ ಟೀಮ್​ ಇಂಡಿಯಾ ಗೆಲ್ಲುವ ವಿಶ್ವಾಸದಲ್ಲಿದೆ.

ABOUT THE AUTHOR

...view details