ನವದೆಹಲಿ :2011ರ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ನಿವೃತ್ತಿಯಿಂದ ಹೊರ ಬಂದಿದ್ದು ಮತ್ತೆ ದೇಶೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಗಾಗಿ ಪಂಜಾಬ್‌ನ 30 ಆಟಗಾರರ ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
39 ವರ್ಷದ ಯುವರಾಜ್ 2019ರ ಜೂನ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಪುನೀತ್ ಬಾಲಿ ಅವರು ಸಂಪರ್ಕಿಸಿದ ನಂತರ, ಯುವರಾಜ್ ತಮ್ಮ ರಾಜ್ಯಕ್ಕಾಗಿ ಮತ್ತೆ ಬ್ಯಾಟ್ ಹಿಡಿಯಲು ನಿರ್ಧರಿಸಿದರು.
ಇದನ್ನೂ ಓದಿ...39ನೇ ವಸಂತಕ್ಕೆ ಕಾಲಿಟ್ಟ ಸಿಕ್ಸರ್ ಕಿಂಗ್ ಯುವಿ ಬದುಕಿನ ಕ್ಷಣಗಳು
19 ವರ್ಷಗಳ ಕಾಲ ಕ್ರಿಕೆಟ್ ವೃತ್ತಿಯಲ್ಲಿದ್ದ ಯುವಿ ಭಾರತದ ಪರ 304 ಏಕದಿನ ಪಂದ್ಯಗಳನ್ನು ಆಡಿದ್ದು, 8701 ರನ್ ಗಳಿಸಿದ್ದಾರೆ. 58 ಟಿ20 ಪಂದ್ಯಗಳಲ್ಲಿ 1,177 ರನ್, 132 ಟೆಸ್ಟ್ಗಳಲ್ಲಿ 2750 ರನ್ ಬಾರಿಸಿದ್ದಾರೆ. ಕೇವಲ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮೂಲಕವೂ ಅಭಿಮಾನಿಗಳ ಮನಗೆದ್ದಿರುವ ಯುವಿ, ಏಕದಿನ, ಟೆಸ್ಟ್, ಟಿ20ಯಲ್ಲಿ ಕ್ರಮವಾಗಿ 111, 36, 28 ವಿಕೆಟ್ಗಳನ್ನು ಪಡೆದಿದ್ದಾರೆ.