ಕರ್ನಾಟಕ

karnataka

By

Published : Sep 20, 2021, 8:45 AM IST

ETV Bharat / sports

ಪಾಕ್​ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್​​ ಟೀಂ ಹಿಂದೇಟು.. ಮಾಜಿ ನಾಯಕ ವಾನ್​ ಸಲಹೆ ಹೀಗಿದೆ

ಇಂಗ್ಲೆಂಡ್​ ಮತ್ತು ಪಾಕಿಸ್ತಾನ ಮಧ್ಯೆ ನಡೆಯಲಿರುವ ಟಿ-20 ಪಂದ್ಯಕ್ಕೆ ಪಾಕ್​ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ತಂಡ ಹಿಂದೇಟು ಹಾಕಿದೆ. ಇದಕ್ಕೆ ಮಾಜಿ ಕ್ಯಾಪ್ಟನ್ ವಾನ್ ಪರಿಹಾರವೊಂದನ್ನು ಸೂಚಿಸಿದ್ದಾರೆ.

ವಾನ್
ವಾನ್

ಲಂಡನ್:ಮುಂದಿನ ತಿಂಗಳು ಇಂಗ್ಲೆಂಡ್​ ಮತ್ತು ಪಾಕಿಸ್ತಾನ ಮಧ್ಯೆ ನಡೆಯಲಿರುವ ಟಿ-20 ಪಂದ್ಯಕ್ಕೆ ಇಂಗ್ಲೆಂಡ್​​, ಪಾಕ್​ ಪ್ರವಾಸ ಕೈಗೊಳ್ಳಬೇಕೋ, ಬೇಡವೋ ಎಂಬ ಗೊಂದಲದಲ್ಲಿದೆ. ಇದಕ್ಕೆ ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್​ ಮೈಕೆಲ್​ ವಾನ್​ ಸಲಹೆಯೊಂದನ್ನ ನೀಡಿದ್ದಾರೆ.

ನಮ್ಮ ತಂಡ ಪಾಕ್​​ಗೆ ಪ್ರಯಾಣಿಸಲು ಅಸುರಕ್ಷಿತ ಎಂದು ಭಾವಿಸಿದರೆ, ಪಂದ್ಯವನ್ನು ರದ್ದುಗೊಳಿಸುವ ಬದಲು ಈ ಸರಣಿಯನ್ನು ಯುಎಇಗೆ ಶಿಫ್ಟ್ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಾಕ್​ ಪ್ರವಾಸವನ್ನು ಅಸುರಕ್ಷಿತ ಎಂದು ಪರಿಗಣಿಸಿದರೆ, ಪಂದ್ಯವನ್ನು ಯುಎಇಗೆ ವರ್ಗಾಯಿಸುವುದು ಉತ್ತಮ ಎಂದು ವಾನ್ ಉಲ್ಲೇಖಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತನ್ನ ಪುರುಷರ ಮತ್ತು ಮಹಿಳಾ ತಂಡಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೋ, ಬೇಡ್ವೋ ಎಂಬ ಗೊಂದಲದಲ್ಲಿದ್ದು, ವರದಿಗಾಗಿ ತನ್ನ ಭದ್ರತಾ ತಜ್ಞರನ್ನು ಕೇಳಿದೆ.

ಇದನ್ನೂ ಓದಿ: IPL 2021: ಗಾಯಕ್ವಾಡ್​ ಭರ್ಜರಿ ಆಟ... ಮುಂಬೈ ವಿರುದ್ಧ ಚೆನ್ನೈ ಜಯಭೇರಿ

2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಅಂತಾರಾಷ್ಟ್ರೀಯ ತಂಡಗಳು ಪಾಕ್​ಗೆ ಪ್ರಯಾಣಿಸಲು ನಿರಾಕರಿಸುತ್ತಿವೆ. ಆದರೆ, ಕೆಲವು ಅಂತಾರಾಷ್ಟ್ರೀಯ ತಂಡಗಳನ್ನು ಆತಿಥ್ಯ ವಹಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಪಂದ್ಯವನ್ನು ಯುಎಇಗೆ ವರ್ಗಾಯಿಸಲು ಒಪ್ಪುತ್ತದೆಯೇ ಎಂಬುದೇ ಈಗಿರುವ ಪ್ರಶ್ನೆಯಾಗಿದೆ.

ABOUT THE AUTHOR

...view details