ಏಕದಿನ ಪಂದ್ಯವಾಗಲಿ, ಟಿ20 ಆಗಲಿ.. ಒಟ್ಟಿನಲ್ಲಿ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಎಂದಿಗೂ ಸೋಲು ಕಂಡಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು 7 ಬಾರಿ ಸೋಲಿಸಿದ್ದರೆ, ಟಿ20 ವಿಶ್ವಕಪ್‌ನಲ್ಲಿ ಐದು ಬಾರಿ ಗೆಲುವು ದಾಖಲಿಸಿ 5-0 ಮುನ್ನಡೆ ಸಾಧಿಸಿದೆ. ಇದೀಗ 6-0 ಗೋಲುಗಳ ಮೇಲೆ ವಿರಾಟ್ ಕೊಹ್ಲಿ ಪಡೆ ಕಣ್ಣಿಟ್ಟಿದೆ.
ಟಿ20-ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ದಿನವಾದ ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯವಿದೆ. ಗಡಿ ಸಂಘರ್ಷದಿಂದಾಗಿ ದಶಕಗಳಿಂದ ಪರಸ್ಪರ ಶತ್ರುಗಳೆಂದು ಉಭಯ ರಾಷ್ಟ್ರಗಳು ಬಿಂಬಿಸಿಕೊಂಡಿರುವುದರಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಮ್ಯಾಚ್ ಇದ್ದರೂ ಅದು ಹೈವೋಲ್ಟೇಜ್ ಪಂದ್ಯವಾಗಿರುತ್ತದೆ.
ಹಿಂದಿನ 5 ಪಂದ್ಯದಲ್ಲೂ ಭಾರತಕ್ಕೆ ಜಯ
2019ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದ ಇಂಡಿಯಾ ಮತ್ತು ಪಾಕ್ ತಂಡಗಳು 2 ವರ್ಷಗಳ ನಂತರ ಇಂದು ದುಬೈನಲ್ಲಿ ಟಿ-20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಹಿಂದೆ ಟಿ-20 ವಿಶ್ವಕಪ್ಗಳಲ್ಲಿ ಒಟ್ಟು ಐದು ಬಾರಿ ಉಭಯ ತಂಡಗಳ ನಡುವೆ ಪೈಪೋಟಿ ನಡೆದಿದ್ದು, ಐದು ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಆರನೇ ಪಂದ್ಯದಲ್ಲಿ ಕೂಡ ಗೆಲ್ಲುವ ವಿಶ್ವಾಸವಿದೆ.
ಇದನ್ನೂ ಓದಿ: ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸುವುದಿಲ್ಲ, ಭಾರತ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ : ಬಾಬರ್ ಅಜಮ್
2007ರಲ್ಲಿ ಗೆಲುವಿನ ಸಮೀಪ ಬಂದಿದ್ದ ಪಾಕ್
ಉಭಯ ತಂಡಗಳ ನಡುವೆ 2007ರಲ್ಲಿ ಚೊಚ್ಚಲ ವಿಶ್ವಕಪ್ ಟೂರ್ನಿ ನಡೆದಿತ್ತು. ಆ ಬಳಿಕ 2012, 2014, 2016ರಲ್ಲಿ ನಡೆದಿತ್ತು. ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡ ಗೆಲುವಿನ ಸಮೀಪ ಹೋಗಿತ್ತಾದರೂ ಗುರಿ ತಲುಪಲಾಗಲಿಲ್ಲ. ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ 13 ರನ್ಗಳು ಬೇಕಿತ್ತು. ಆಗ ಜೋಗಿಂದರ್ ಶರ್ಮಾಗೆ ಬಾಲ್ ಎಸೆಯಲು ಮಹೇಂದ್ರ ಸಿಂಗ್ ಧೋನಿ ಅವಕಾಶ ಮಾಡಿಕೊಟ್ಟಿದ್ದರು. ಒಂದು ವೈಡ್ ಬಳಿಕ ಮಿಸ್ಬಾ ಹೊಡೆದ ಸಿಕ್ಸರ್‌ನಿಂದ 4 ಬಾಲ್ಗೆ 6 ರನ್ ಉಳಿದಿತ್ತಾದರೂ, 5 ರನ್ಗಳ ನಷ್ಟಕ್ಕೆ ಪಾಕ್ ಸೋಲು ಕಂಡಿತ್ತು.