ಶಾರ್ಜಾ:ಐಸಿಸಿ ಟಿ-20 ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ತಾನ ತಂಡ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಈಚೆಗೆ ಭದ್ರತೆ ನೆಪ ಹೇಳಿ ಪಾಕಿಸ್ತಾನದಿಂದ ದಿಢೀರ್ ಆಗಿ ವಾಪಸ್ ಬಂದಿದ್ದ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ.
ಶಾರ್ಜಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 134ರನ್ಗಳಿಕೆ ಮಾಡಿತು. ತಂಡದ ಪರ ಮಿಚೆಲ್ 27 ರನ್, ವಿಲಿಯಮ್ಸನ್ 25 ಹಾಗೂ ಕಾನ್ವೆ 27ರನ್ಗಳಿಕೆ ಮಾಡಿ ತಂಡ 130ರ ಗಡಿ ದಾಟುವಂತೆ ಮಾಡಿದರು.
135ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭಿಕ ಆಘಾತದ ನಡುವೆ ಕೂಡ ಸಂಘಟಿತ ಬ್ಯಾಟಿಂಗ್ ಬಲದಿಂದ ಕಿವೀಸ್ ವಿರುದ್ಧ ಗೆಲುವು ದಾಖಲು ಮಾಡಿದೆ. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 33ರನ್ಗಳಿಕೆ ಮಾಡಿದ್ರೆ, ಶೊಯೆಬ್ ಮಲಿಕ್ ಅಜೇಯ 26 ಹಾಗೂ ಆಸೀಫ್ ಅಲಿ ಸ್ಪೋಟಕ 27ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ತಂಡ 18.4 ಓವರ್ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 135ರನ್ಗಳಿಕೆ ಮಾಡಿ, ಸತತ ಎರಡನೇ ಜಯ ಸಾಧಿಸಿದೆ.
ಪಾಕ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಹ್ಯಾರಿಸ್ ರೌಫ್ 4 ವಿಕೆಟ್ ಪಡೆದು ಮಿಂಚಿದ್ರೆ, ಶಾಹಿನ್ ಆಫ್ರಿದಿ, ವಾಸೀಂ ಹಾಗೂ ಹಫೀಜ್ ತಲಾ 1 ವಿಕೆಟ್ ಪಡೆದುಕೊಂಡರು. ತಂಡದ ಪರ ನಾಲ್ಕು ವಿಕೆಟ್ ಪಡೆದುಕೊಂಡು ಮಿಂಚಿದ ರೌಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.