ಮುಂಬೈ: ಇಂದಿನಿಂದ ದೇಶಿ ಋತುವಿಗೆ ಚಾಲನೆ ದೊರೆಯಲಿದೆ. ಬಿಸಿಸಿಐ ಆಯೋಜಿಸುವ ಟಿ-20 ಮಾದರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಇಂದಿನಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಜಮ್ಮು-ಕಾಶ್ಮೀರ ತಂಡವನ್ನು ಆಲೂರಿನ ಕೆಎಸ್ಸಿಎ ಗ್ರೌಂಡ್ನಲ್ಲಿ ಎದುರಿಸಲಿದೆ.
ಲೀಗ್ನಲ್ಲಿ 38 ತಂಡಗಳಿದ್ದು, 6 ಗುಂಪುಗಳಾಗಿ ವಿಂಗಡಿಸಲಾಗಿದೆ. 5 ಗುಂಪುಗಳಲ್ಲಿ ಬಲಿಷ್ಠ 6 ತಂಡಗಳಿರಲಿವೆ. ಪ್ಲೇಟ್ ಗುಂಪಿನಲ್ಲಿ 8 ತಂಡಗಳಿವೆ. ಬೆಂಗಳೂರು, ವಡೋದರಾ, ಇಂದೋರ್, ಮುಂಬೈ ಮತ್ತು ಚೆನ್ನೈನಲ್ಲಿ ಲೀಗ್ ಹಂತದ ಪಂದ್ಯಗಳು ಮತ್ತು ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್ ಪಂದ್ಯಗಳು ನಡೆಯಲಿವೆ.
ಕರ್ನಾಟಕ ತಂಡ ಇರುವ ಎ ಗುಂಪಿನಲ್ಲಿ ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಪಂಜಾಬ್, ರೈಲ್ವೇಸ್, ತ್ರಿಪುರ ತಂಡಗಳು ಸ್ಥಾನ ಪಡೆದಿವೆ.