ಮೆಲ್ಬೋರ್ನ್:ಜೀವ ಸುರಕ್ಷಾ ವಲಯ (ಬಯೋಬಬಲ್) ನಿಯಮ ಉಲ್ಲಂಘಿಸಿದ ಬಿಗ್ ಬ್ಯಾಷ್ ಲೀಗ್ನ (ಬಿಬಿಎಲ್) ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ವಿಲ್ ಸದರ್ಲೆಂಡ್ಗೆ 5000 ಡಾಲರ್ (₹366,710) ದಂಡ ವಿಧಿಸಲಾಗಿದೆ.
ಜನವರಿ 21ರಂದು ಬಯೋಬಬಲ್ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣ ತನಿಖೆ ಪೂರ್ಣಗೊಂಡ ನಂತರ ವಿಲ್ ಸದರ್ಲೆಂಡ್ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನೀತಿ ಸಂಹಿತೆಯಡಿ ದಂಡ ಹಾಕಲಾಗಿದೆ ಎಂದು ಸಿಎ ಹೇಳಿಕೆಯಲ್ಲಿ ತಿಳಿಸಿದೆ.
ಬಿಬಿಎಲ್ ಟೂರ್ನಿ ಸಂದರ್ಭದಲ್ಲಿ ಗಾಲ್ಫ್ ಆಡಿದ್ದ ಮತ್ತು ಹೊರಗಿನ ಜನರೊಂದಿಗೆ ಓಡಾಡಿದ್ದಲ್ಲದೇ, ಊಟ ಮಾಡಿದ್ದರು. ಹೀಗಾಗಿ, ಸಿಎ ನೀತಿ ಸಂಹಿತೆಯ ವಿಧಿ-2.23ರ ಅಡಿ ವರದಿ ಸಿದ್ಧಪಡಿಸಿ ಅವರಿಗೆ ನೋಟಿಸ್ ನೀಡಲಾಗಿತ್ತು.