ಅಬುಧಾಬಿ:ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ನಲ್ಲಿ ಸತತ ಮೂರು ಸೋಲು ಅನುಭವಿಸಿದೆ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ಗೆ ಮತ್ತೊಂದು ಕಹಿ ಅನುಭವವಾಗಿದೆ.
ಆರ್ಆರ್ ತಂಡದ ನಾಯಕನಿಗೆ ಕಹಿ ಮೇಲೆ ಕಹಿ... ಸ್ಟೀವ್ ಸ್ಮಿತ್ಗೆ ಬಿತ್ತು 12 ಲಕ್ಷ ರೂ. ದಂಡ! - ಸ್ಟೀವ್ ಸ್ಮಿತ್ ಸುದ್ದಿ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸತತ ಮೂರನೇ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ಗೆ ಮತ್ತೊಂದು ಕಹಿ ಅನುಭವವಾಗಿದೆ.

ಹೌದು, ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 57 ರನ್ಗಳಿಂದ ಸೋಲು ಕಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ದಂಡ ವಿಧಿಸಿದೆ. ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿತು. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡ ನಿಧಾಗತಿಯಲ್ಲಿ ಬೌಲಿಂಗ್ ಮಾಡಿತ್ತು. ಹೀಗಾಗಿ ತಂಡದ ನಾಯಕ ಸ್ವೀವ್ ಸ್ಮಿತ್ಗೆ ಐಪಿಎಲ್ 12 ಲಕ್ಷ ರೂ. ದಂಡ ವಿಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. 194 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 18.1 ಓವರ್ಗಳಲ್ಲಿ 136 ರನ್ಗಳಿಗೆ ಸರ್ವಪತನ ಕಂಡು ರೋಹಿತ್ ಪಡೆಗೆ ಶರಣಾಯಿತು.