ಕರಾಚಿ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಇದೀಗ ಮತ್ತೆ ಆರಂಭವಾಗಿದೆ. 8 ತಿಂಗಳ ಹಿಂದೆ ಲೀಗ್ ಹಂತದ ಪಂದ್ಯದ ವೇಳೆ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಟೂರ್ನಿ ಮತ್ತೆ ಆರಂಭವಾಗಿದೆ.
ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್ ಕಲಾಂದರ್ಸ್ ತಂಡದ ಆಲ್ರೌಂಡರ್ ಡೇವಿಡ್ ವೈಸೆಯ ಅದ್ಭುತ ಪ್ರದರ್ಶನದಿಂದ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 25 ರನ್ಗಳ ಭರ್ಜರಿ ಜಯ ದಾಖಲಿಸಿ ಫೈನಲ್ ಪ್ರವೇಶ ಪಡೆದಿದೆ.
ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಲಾಹೋರ್ ಕಲಾಂದರ್ಸ್ ತಂಡ ಸೆಣೆಸಾಡಲಿದೆ. ಇದಕ್ಕೂ ಹಿಂದೆ ಕರಾಚಿ ಕಿಂಗ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ವಿರುದ್ಧ ಸೂಪರ್ ಓವರ್ನಲ್ಲಿ ಜಯಿಸಿ ಫೈನಲ್ ಪ್ರವೇಶಿಸಿತ್ತು.