ಟಿ20 ಪಂದ್ಯಾವಳಿಯ ಸೂಪರ್ 12 ಹಂತಗಳಿಗೆ ಮುಂಚಿತವಾಗಿ ಭಾರತವು ತಮ್ಮ ಎರಡು ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿ ಜಯದ ಹಾದಿ ಹಿಡಿದಿದೆ. ಭಾರತದ ಅತ್ಯುತ್ತಮ ಪ್ರದರ್ಶನದಿಂದ ಪ್ರಭಾವಿತರಾದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ವಾನ್, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟಿ20 ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ ಎಂದು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಭಾರತ ತಂಡದ ವಾರ್ಮ್ ಅಪ್ ಆಟದ ವೈಖರಿ ನೋಡಿದರೆೆ ಕಪ್ ಗೆಲ್ಲೋದು ಖಚಿತ ಎಂದು ಅವರು ಹೇಳಿದ್ದಾರೆ.