ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ದ್ವಿತೀಯಾರ್ಧದ ಪಂದ್ಯಗಳು ಯುಎಇನಲ್ಲಿ ಆರಂಭಗೊಂಡಿದೆ. ಕ್ರೀಡಾಭಿಮಾನಿಗಳು ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಣೆ ಮಾಡಲು ಸೀಮಿತ ಅವಕಾಶ ನೀಡಲಾಗಿದೆ. ಇದರ ಮಧ್ಯೆ IPLಗೆ ಮತ್ತಷ್ಟು ತಾರಾ ಮೆರುಗು ನೀಡುವ ಉದ್ದೇಶಿದಿಂದ ವಿವಿಧ ಬಾಲಿವುಡ್ ಮಹಿಳಾ ತಾರೆಯರು ಹಾಗೂ ಕ್ರಿಕೆಟರ್ವೊಬ್ಬರ ಪತ್ನಿಗೂ ನಿರೂಪಣೆ ಮಾಡುವ ಚಾನ್ಸ್ ಸಿಕ್ಕಿದೆ.
ಪ್ರತಿವರ್ಷ ಐಪಿಎಲ್ ಆರಂಭಗೊಳ್ತಿದ್ದಂತೆ ಗ್ಲ್ಯಾಮರ್ಗೋಸ್ಕರ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗುತ್ತದೆ. ಚಿಯರ್ ಗರ್ಲ್ಸ್ ಜೊತೆಗೆ ವಿವಿಧ ಚಿತ್ರರಂಗದ ನಟಿಮಣಿಯರು ಹಾಗೂ ಸ್ಟಾರ್ ಆ್ಯಂಕರ್ಸ್ಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತದೆ. ಆದರೆ ಕೊರೊನಾ ವೈರಸ್ನಿಂದಾಗಿ ಕಳೆದೆರಡು ಸೀಸನ್ನಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ. ಇದೀಗ ದುಬೈನಲ್ಲಿ ಪುನಾರಂಭಗೊಂಡಿರುವ ಐಪಿಎಲ್ನಲ್ಲಿ ಸುರಸುಂದರಿಯರ ತಳಕು ಬಳುಕಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ.
ಇವರಿಗೆಲ್ಲಾ ಚುಟುಕು ಕ್ರಿಕೆಟ್ನಲ್ಲಿ ಮಿಂಚುವ ಅವಕಾಶ:
- ತಾನ್ಯಾ ಪುರೋಹಿತ್
ತಾನ್ಯಾ ಪುರೋಹಿತ್ ಬಾಲಿವುಡ್ ಸ್ಟಾರ್ ನಟಿ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಟನೆಯ NH10 ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ದುಬೈನಲ್ಲಿ ಆಯೋಜನೆಗೊಂಡಿರುವ ಐಪಿಎಲ್ನಲ್ಲಿ ಹಿಂದಿ ಆ್ಯಂಕರ್ ಆಗಿ ಕೆಲಸ ಮಾಡ್ತಿದ್ದಾರೆ.
- ಕೀರಾ ನಾರಾಯಣ್