ಟಿ20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಮೊದಲ ದಿನ ಎರಡು ಅದ್ಭುತ ಪ್ರಯತ್ನಗಳಿಗೆ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಐಡೆನ್ ಮಾರ್ಕ್ರಾಮ್ ಹಾಗೂ ವೆಸ್ಟ್ ಇಂಡೀಸ್ ಎಡಗೈ ಸ್ಪಿನ್ನರ್ ಅಕೀಲ್ ಹೊಸೈನ್ ಅವರ ಕ್ಯಾಚ್‌ಗಳನ್ನು ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಕ್ಯಾಚ್ಗಳೆಂದೇ ಬಣ್ಣಿಸಲಾಗುತ್ತಿದೆ.
ಸೂಪರ್ 12 ಸುತ್ತಿನ ಮೊದಲನೇ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದಿದ್ದು, ಎರಡನೇ ಪಂದ್ಯವು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡಿಸ್ ನಡುವೆ ನಡೆದಿತ್ತು. ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವಲ್ಲಿ ಬಲಾಢ್ಯ ಆಸ್ಟ್ರೇಲಿಯಾ ಯಶಸ್ವಿಯಾಗಿದ್ದು, ಐದು ವಿಕೆಟ್ಗಳ ಗೆಲುವು ದಾಖಲಿಸಿತು. ಹಾಗೆಯೇ, ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೆಸ್ಟ್ ಇಂಡಿಸ್ ವಿರುದ್ಧ ಇಂಗ್ಲೆಂಡ್ ಜಯ ಸಾಧಿಸಿತು.
ಇದನ್ನೂ ಓದಿ: ವಿಶ್ವ ಚುಟುಕು ಸಮರ: ದಕ್ಷಿಣ ಆಫ್ರಿಕಾಗೆ ಸೋಲುಣಿಸಿ ಗೆಲುವಿನ ಶುಭಾರಂಭ ಮಾಡಿದ ಕಾಂಗರೂ ಪಡೆ
ಈ ಎರಡೂ ಪಂದ್ಯಗಳಲ್ಲಿ ಎಲ್ಲರ ಗಮನ ಸೆಳೆದದ್ದು ಮಾತ್ರ ಐಡೆನ್ ಮಾರ್ಕ್ರಾಮ್ ಮತ್ತು ಅಕೀಲ್ ಹೊಸೈನ್. ಇವರು ಹಿಡಿದ ಅದ್ಭುತ ಕ್ಯಾಚ್‌ಗಳನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟಿದ್ದರು.
ಐಡೆನ್ ಮಾರ್ಕ್ರಾಮ್ರ ಡೈವಿಂಗ್ ಕ್ಯಾಚ್
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ಗೆ ಅರ್ಧಶತಕ ಪೂರೈಸಲು ಎಡೆಮಾಡಿಕೊಡದ ಐಡೆನ್ ಮಾರ್ಕ್ರಮ್, 15ನೇ ಓವರ್‌ನ ಐದನೇ ಎಸೆತದಲ್ಲಿ ಸ್ಮಿತ್ ಹೊಡೆದ ಚೆಂಡನ್ನು ಅಮೋಘ ಶೈಲಿಯಲ್ಲಿ ಹಿಡಿದರು. ಮಾರ್ಕ್ರಮ್ಮಾಡಿರುವ ಡೈವಿಂಗ್ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತ ಇಂಗ್ಲೆಂಡ್ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಹೊಡೆತವನ್ನು ಬೌಲಿಂಗ್ ಮಾಡುತ್ತಿದ್ದ ಅಕೀಲ್ ಹೊಸೈನ್ ಕ್ಯಾಚ್ ಮಾಡಿದ್ರು. ಇಂಗ್ಲೆಂಡ್ ವಿರುದ್ಧ ಸೋತರೂ ಕೂಡ ಈ ಕ್ಯಾಚ್ ವಿಂಡೀಸ್ ತಂಡದ ಹೈಲೈಟ್ ಆಗಿತ್ತು.
ಇದನ್ನೂ ಓದಿ: ಟಿ-20 ವಿಶ್ವಕಪ್ ENG vs WI : ವಿಂಡೀಸ್ ವಿರುದ್ಧ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಜಯ ಸಾಧಿಸಿದ ಇಂಗ್ಲೆಂಡ್