ನವದೆಹಲಿ: ಸ್ವೀಡನ್ ಸಾಕರ್ ಫೆಡರೇಷನ್ ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ತಂಡವನ್ನು ಇನ್ನೂ ವಿಶ್ವಕಪ್ ಕ್ಯಾಲಿಫೈಯಿಂಗ್ನಲ್ಲಿ ಮುಂದುವರಿಸುತ್ತಿರುವುದಕ್ಕೆ ಫಿಫಾ ವಿರುದ್ಧ ಬೇಸರ ವ್ಯಕ್ತಪಡಿಸಿದೆ.
ಪೋಲೆಂಡ್ ಮತ್ತು ಜೆಕ್ ಗಣರಾಜ್ಯಗಳು ಕ್ವಾಲಿಫೈಯರ್ನಲ್ಲಿ ರಷ್ಯಾ ಜೊತೆಗೆ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ನಿರಾಕರಿಸಿದ ನಂತರ ಸ್ವೀಡನ್ ರಷ್ಯಾ ವಿರುದ್ಧ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾ ಫುಟ್ಬಾಲ್ ತಂಡ ತನ್ನ ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರೀಯ ಗೀತೆಯನ್ನು ಬಳಸದೆ ಫುಟ್ಬಾಲ್ ಯೂನಿಯನ್ ಆಫ್ ರಷ್ಯಾ ಎಂಬ ಹೆಸರಿನಲ್ಲಿ ತಟಸ್ಥ ಸ್ಥಳದಲ್ಲಿ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಆಡುವುದಕ್ಕೆ ಅವಕಾಶ ಕೊಡಲು ಫಿಫಾ ಪ್ರಯತ್ನಿಸಿತ್ತು. ಇದಕ್ಕೆ ಪೋಲೆಂಡ್ ಮತ್ತು ಜೆಕ್ ಗಣರಾಜ್ಯ ವಿರೋಧ ವ್ಯಕ್ತಪಡಿಸಿವೆ.