ದುಬೈ: ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸೂರ್ಯಕುಮಾರ್ 906 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಅವರು ಪಾಕಿಸ್ತಾನದ ವಿಕೆಟ್ ಕೀಪಿಂಗ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (811 ಪಾಯಿಂಟ್‌ಗಳು) ಅವರಿಗಿಂತ 100 ಅಂಕ ಮುಂದಿದ್ದಾರೆ.
ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಅವರು ಏಳು ಪಂದ್ಯಗಳಲ್ಲಿ 20.86 ಸರಾಸರಿಯೊಂದಿಗೆ ಕೇವಲ 146 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಅವರು ಇಲ್ಲಿಯವರೆಗೆ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ.
ಇತ್ತೀಚೆಗಷ್ಟೇ ಮುಗಿದ ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತರಾಷ್ಟ್ರೀಯ ಸರಣಿಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅದರೊಂದಿಗೆ ರಿಜ್ವಾನ್ ಸೂರ್ಯಕುಮಾರ್ ಮೇಲಿನ ಅಂತರವನ್ನು 100 ಕ್ಕಿಂತ ಕಡಿಮೆ ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ಟಿ20 ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದಾರೆ. ಆದರೂ ಬಲಗೈ ಆಟಗಾರನು ಸರಣಿಯ ಅಂತಿಮ ಪಂದ್ಯದಲ್ಲಿ ಕೇವಲ 19 ರನ್ ಗಳಿಸಿ ಕಾರಣ 13 ರೇಟಿಂಗ್ ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದು, 756 ಅಂಕಗಳಿಂದ ಮೂರನೇ ಸ್ಥಾನದಲ್ಲಿದ್ದಾರೆ.
ಟಿ20 ಅಂತರಾಷ್ಟ್ರೀಯ ಬ್ಯಾಟರ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ಡ್ಯಾಶರ್ ಮಾರ್ಕ್ ಚಾಪ್‌ಮನ್ ಅವರು ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಶತಕವನ್ನು ಗಳಿಸಿದ ನಂತರ ಅವರ ವೃತ್ತಿಜೀವನದ ಅತ್ಯುತ್ತಮ 35 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದನ್ನೂ ಓದಿ:ಅರ್ಜುನ್ ತೆಂಡೂಲ್ಕರ್ಗೆ ಬೌಲಿಂಗ್ ವೇಗದ ಬಗ್ಗೆ ಹೆಚ್ಚಿನ ಟ್ರೈನ್ ಮಾಡುತ್ತೇವೆ: ಶೇನ್ ಬಾಂಡ್
ಅಂತಿಮ ಪಂದ್ಯದಲ್ಲಿ 36 ರನ್ ಗಳಿಸಿದ ಇಫ್ತಿಕರ್ ಅಹ್ಮದ್ ಆರು ಸ್ಥಾನಗಳ ಏರಿಕೆ ಕಂಡು ಜಂಟಿ 38 ನೇ ಸ್ಥಾನಕ್ಕೆ ತಲುಪಿದ್ದು, ಅದು ಅವರ ವೃತ್ತಿಜೀವನದ ಅತ್ಯುತ್ತಮ ಸ್ಥಾನ ಮತ್ತು ಮೂರನೇ ಅತಿ ಹೆಚ್ಚು ಶ್ರೇಯಾಂಕದ ಪಾಕಿಸ್ತಾನ ಬ್ಯಾಟರ್ ಆಗಿದ್ದಾರೆ. ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಇಮಾದ್ 31 ರನ್ ಗಳಿಸಿದರು, ಆದರೆ ಸರಣಿಯಲ್ಲಿ 10.37 ರ ಸರಾಸರಿಯಲ್ಲಿ ಅವರ ಎಂಟು ವಿಕೆಟ್‌ಗಳನ್ನು ಪಡೆದರು. ಇಮಾದ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 100 ರೊಳಗೆ ಸ್ಥಾನ ಪಡೆದಿದ್ದಾರೆ ಮತ್ತು ಆಲ್‌ರೌಂಡರ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ 24 ನೇ ಸ್ಥಾನಕ್ಕೆ ಏರಿದ್ದಾರೆ.
ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಟಿ20 ಅಂತರಾಷ್ಟ್ರೀಯ ಬೌಲರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದರೆ, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಆಲ್ ರೌಂಡರ್‌ಗಳ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
ಇದನ್ನೂ ಓದಿ:RCB vs KKR : ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಕ್ಷೇತ್ರ ರಕ್ಷಣೆ ಆಯ್ಕೆ