ಕರ್ನಾಟಕ

karnataka

ETV Bharat / sports

ಟಿ20ಯಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯ ಟೆಸ್ಟ್​ಗೆ ಪದಾರ್ಪಣೆ ಸಾಧ್ಯತೆ

ಮುಂದಿನ ತಿಂಗಳು ನಡೆಯುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಗೆ ಗಾಯಗೊಂಡ ರವೀಂದ್ರ ಜಡೇಜಾ ಮರಳದಿದ್ದರೆ, ಸೂರ್ಯಕುಮಾರ್​ ಯಾದವ್​ ಅವಕಾಶ ಪಡೆಯುವ ಸಾಧ್ಯತೆ ಇದೆ.

bangladesh-test-series
ಸೂರ್ಯ ಟೆಸ್ಟ್​ಗೆ ಪದಾರ್ಪಣೆ ಸಾಧ್ಯತೆ

By

Published : Nov 23, 2022, 9:59 PM IST

ನವದೆಹಲಿ:ಮೊಣಕಾಲಿನ ಗಾಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತದ ತಾರಾ ಆಲ್​ರೌಂಡರ್​ ರವೀಂದ್ರ ಜಡೇಜಾ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ಬಾಂಗ್ಲಾದೇಶದ ಟೆಸ್ಟ್​ ಸರಣಿಗೆ ಆಯ್ಕೆಯಾಗಿರುವ ಜಡೇಜಾ ಸಂಪೂರ್ಣ ಫಿಟ್​ ಆಗದೇ ಇದ್ದಲ್ಲಿ ಟಿ20 ನಂ.1 ದಾಂಡಿಗ ಸೂರ್ಯಕುಮಾರ್​ ಯಾದವ್​ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.

ರವೀಂದ್ರ ಜಡೇಜಾ ಬಾಂಗ್ಲಾ ಟೆಸ್ಟ್​ ಸರಣಿಗೂ ಮೊದಲು ಬೆಂಗಳೂರಿನ ಎನ್​ಸಿಎ ಶಿಬಿರದಲ್ಲಿ ಭಾಗಿಯಾಗಿ ಫಿಟ್ನೆಸ್​ ಸಾಬೀತು ಮಾಡಬೇಕು. ಒಂದು ವೇಳೆ ನಪಾಸಾದಲ್ಲಿ ಸರಣಿಯಿಂದ ಹೊರಗುಳಿಯಲಿದ್ದು, ಅವರ ಜಾಗಕ್ಕೆ ಭರ್ಜರಿ ಫಾರ್ಮ್​ನಲ್ಲಿರುವ ಸೂರ್ಯಕುಮಾರ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.

4ನೇ ಸ್ಪಿನ್ನರ್​ಗೆ ಸಿಗುತ್ತಾ ಅವಕಾಶ:ಸ್ಪಿನ್​ ಆಲ್​ರೌಂಡರ್​ ಜಡೇಜಾ ಸ್ಥಾನದಲ್ಲಿ ಮತ್ತೊಬ್ಬ ಸ್ಪಿನ್ನರ್‌ ಕಣಕ್ಕಿಳಿಸಿದಲ್ಲಿ ಭಾರತ - ಎ- ತಂಡದ ಮಾಂತ್ರಿಕ ಸೌರಭ್‌ ಕುಮಾರ್‌ ಅವಕಾಶ ಪಡೆಯಬಹುದು. ಸೌರಭ್ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ತಂಡದಲ್ಲಿ ಈಗಾಗಲೇ ಹಿರಿಯ ಸ್ಪಿನ್ನರ್​​ ರವಿಚಂದ್ರನ್​ ಅಶ್ವಿನ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್‌ಗಳಿದ್ದಾರೆ. ನಾಲ್ಕನೇ ಸ್ಪಿನ್ನರ್ ಆಗಿ ಸೌರಭ್​ ಕುಮಾರ್​ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಡಿಸೆಂಬರ್ 14 ರಿಂದ 18 ರವರೆಗೆ ಚಿತ್ತಗಾಂಗ್‌ನಲ್ಲಿ ಏಕೈಕ ಟೆಸ್ಟ್​ ನಡೆಯಲಿದ್ದು, ಬಳಿಕ 22 ರಿಂದ 26 ರ ನಡುವೆ ಮೀರ್‌ಪುರ ಮೈದಾನದಲ್ಲಿ ಏಕದಿನ ಸರಣಿ ನಡೆಯಲಿದೆ.

ಓದಿ:ಟಿ20 ರ‍್ಯಾಂಕಿಂಗ್​ನಲ್ಲಿ ಸೂರ್ಯಕುಮಾರ್ ಟಾಪ್.. ಏಕದಿನ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಗೆ ಆರನೇ ಸ್ಥಾನ

ABOUT THE AUTHOR

...view details