ಮುಂಬೈ:ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಎಲ್ಲರೂ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ.
ಇದೀಗ ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಸಾಮಾಜಿಕ ಅಂತರದೊಂದಿಗೆ ತಮ್ಮ ಹೆಂಡತಿಗೆ ಮುತ್ತು ನೀಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನ ಲಯಕ್ಕೆ ಮರಳಿದೆ. ಇದೇ ಖುಷಿಯಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ದೇವಿಶಾ ಸ್ಟೇಡಿಯಂನ ಗ್ಲಾಸ್ ಹಿಂಬದಿಯಲ್ಲಿದ್ದು, ಮೈದಾನದಲ್ಲಿದ್ದ ಸೂರ್ಯಕುಮಾರ್ ತಮ್ಮ ಪತ್ನಿಗೆ ಚುಂಬಿಸಿದ್ದಾರೆ. ಗ್ಲಾಸ್ನ ಒಂದು ತುದಿಯಲ್ಲಿ ಪತ್ನಿ ಹಾಗೂ ಮತ್ತೊಂದು ತುದಿಯಲ್ಲಿ ಸೂರ್ಯಕುಮಾರ್ ಇರುವುದು ವಿಶೇಷವಾಗಿದೆ.
ಇಲ್ಲಿ ಐಪಿಎಲ್ನ ಯಾವುದೇ ಬಯೋಬಬಲ್ ಉಲ್ಲಂಘನೆಯಾಗಿಲ್ಲ ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ನಿರ್ದೇಶಕ ಜಹೀರ್ ಖಾನ್ ಪತ್ನಿ ಸಾಗರಿಕಾ ಘಾಟ್ಕೆ ಮಾಹಿತಿ ನೀಡಿದ್ದಾರೆ.