ಮೆಲ್ಬೋರ್ನ್(ಆಸ್ಟ್ರೇಲಿಯಾ):ಭರ್ಜರಿ ಬ್ಯಾಟಿಂಗ್ನಿಂದಾಗಿ ಟಿ20 ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಈ ಕ್ಯಾಲೆಂಡರ್ ವರ್ಷದಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ದಾಖಲೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ 2ನೇ ಆಟಗಾರ ಎಂಬ ಖ್ಯಾತಿ ಪಡೆದರು. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಈ ದಾಖಲೆ ಮಾಡಿದ ಮೊದಲಿಗ.
ಟಿ20 ವಿಶ್ವಕಪ್ನಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಭರ್ಜರಿ ಅರ್ಧಶತಕ ಸಿಡಿಸಿದರು. 244ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ 61 ರನ್ ಗಳಿಸಿದ ಸೂರ್ಯ, ಈ ವಿಶ್ವಕಪ್ನ ಮೂರನೇ ಫಿಫ್ಟಿ ಬಾರಿಸುವ ಮೂಲಕ 1 ಸಾವಿರ ರನ್ ಸಾಧನೆಗೆ ಪಾತ್ರರಾದರು.
ಸೂರ್ಯಕುಮಾರ್ ಯಾದವ್ ಈ ವರ್ಷ ಆಡಿದ 28 ಇನ್ನಿಂಗ್ಸ್ಗಳಲ್ಲಿ 44.60 ಸರಾಸರಿಯಲ್ಲಿ 1,026 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 9 ಅರ್ಧಶತಕಗಳು ಅವರ ಬ್ಯಾಟ್ನಿಂದ ಸಿಡಿದಿವೆ. 117 ಅತ್ಯುತ್ತಮ ಸ್ಕೋರ್ ಆಗಿದೆ.