ನಾಟಿಂಗ್‌ಹ್ಯಾಮ್ (ಯುಕೆ): ಟೀಂ ಇಂಡಿಯಾದ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ ಭಾನುವಾರ T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇಲ್ಲಿಯ ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ T20I ಪಂದ್ಯದಲ್ಲಿ ಮೂರು ಅಂಕಗಳನ್ನು ತಲುಪುವ ಮೂಲಕ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಸೂರ್ಯಕುಮಾರ್ 14 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಒಳಗೊಂಡಂತೆ ಭರ್ಜರಿ 117 (55) ರನ್ ಗಳಿಸಿದರು.
T-20I ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಅವರ ಆಕ್ರಮಣಕಾರಿ ಆಟದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಅಂತಿಮ T-20I ಪಂದ್ಯದಲ್ಲಿ ಭಾರತ 17 ರನ್ ಅಂತರದ ಸೋಲಿಗೆ ಶರಣಾಯಿತು. 216 ರನ್ ಗುರಿ ಬೆನ್ನಟ್ಟಿದ್ದ ಭಾರತ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.
ಅವರ 19ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು T20I ನಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ದಾಖಲೆ ಬರೆದರು. ಇತ್ತೀಚೆಗೆ ಐರ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಭಾರತದ ಮತ್ತೋರ್ವ ಆಟಗಾರ ದೀಪಕ್ ಹೂಡಾ 104 (57) ರನ್ ಚೆಚ್ಚುವ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದರು. ಭಾರತದ ನಾಯಕ ರೋಹಿತ್ ಶರ್ಮಾ (4), ಕೆಎಲ್ ರಾಹುಲ್ (2), ಸುರೇಶ್ ರೈನಾ (1) ಮತ್ತು ದೀಪಕ್ ಹೂಡಾ (1) ಅವರ ನಂತರ ಸೂರ್ಯಕುಮಾರ್ ಚುಟುಕು ಪಂದ್ಯದಲ್ಲಿ ಶತಕ ಗಳಿಸಿದ ಐದನೇ ಭಾರತೀಯ ಬ್ಯಾಟರ್ ಆದರು.
- ರೋಹಿತ್ ಶರ್ಮಾ (4)
- ಕೆಎಲ್ ರಾಹುಲ್ (2)
- ಸುರೇಶ್ ರೈನಾ (1)
- ದೀಪಕ್ ಹೂಡಾ (1)
- ಸೂರ್ಯಕುಮಾರ್ ಯಾದವ್ (1)
ಶತಕವೀರ ಸೂರ್ಯಕುಮಾರ್ ಯಾದವ್ ಅವರ ಆಕ್ರಮಣಕಾರಿ ಆಟದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಅಂತಿಮ T-20I ಪಂದ್ಯದಲ್ಲಿ ಭಾರತ 17 ರನ್ ಅಂತರದ ಸೋಲಿಗೆ ಶರಣಾಯಿತು. 216 ರನ್ ಗುರಿ ಬೆನ್ನಟ್ಟಿದ್ದ ಭಾರತ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.