ಅಹ್ಮದಾಬಾದ್; ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಮತ್ತು 4 ವಿಕೆಟ್ ಪಡೆದ ಕನ್ನಡಿಗ ಪ್ರಸಿಧ್ ಕೃಷ್ಣ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಅಜೇಯ 34 ರನ್ಗಳಿಸಿದ್ದ ಸೂರ್ಯಕುಮಾರ್ ಯಾದವ್ 2ನೇ ಪಂದ್ಯದಲ್ಲೂ ನಿರ್ಣಾಯಕ 64 ರನ್ ಸಿಡಿಸಿದ್ದರು.
ಒಟ್ಟಾರೆ 6 ಏಕದಿನ ಪಂದ್ಯವನ್ನಾಡಿರುವ ಕ್ರಮವಾಗಿ 31, 53, 40, 39, 34 ಮತ್ತು 64 ರನ್ಗಳಿಸಿದ್ದು, ವೃತ್ತಿ ಜೀವನದ ಆರಂಭದ 6 ಇನ್ನಿಂಗ್ಸ್ಗಳಲ್ಲಿ 30+ ರನ್ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು.
ಇವರಿಗೂ ಮುನ್ನ ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಫಖರ್ ಜಮಾನ್, ನೆದರ್ಲೆಂಡ್ಸ್ನ ರಯಾನ್ ಟೆನ್ ಡೊಶಾಟ್ ಮತ್ತು ಆಸ್ಟ್ರೇಲಿಯಾದ ಟಾಮ್ ಕೂಪರ್ ತಮ್ಮ ಮೊದಲ ಐದು ಇನಿಂಗ್ಸ್ಗಳಲ್ಲಿ 30+ ರನ್ಗಳಿಸುವ ಮೂಲಕ ದಾಖಲೆ ಬರೆದಿದ್ದರು.