ದುಬೈ:ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಂಕ ಕಳೆದುಕೊಂಡರೂ ನಂಬರ್ 1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ವಿಶ್ವಕಪ್ನಲ್ಲಿ ಬಿರುಸಿನ ಬ್ಯಾಟ್ ಮಾಡಿದ ಯಾದವ್ 3 ಅರ್ಧಶತಕ ಸೇರಿ 59.75 ರ ಸರಾಸರಿಯಲ್ಲಿ 239 ರನ್ ಗಳಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ 14 ರನ್ಗೆ ಔಟಾಗಿ ನಿರಾಸೆ ಮೂಡಿಸುವ ಮೂಲಕ 10 ಅಂಕ ಕಳೆದುಕೊಂಡಿದ್ದಾರೆ.
ಸೂರ್ಯಕುಮಾರ್ ವಿಶ್ವಕಪ್ ವೇಳೆ ಪಾಕಿಸ್ತಾನದ ಮೊಹಮದ್ ರಿಜ್ವಾನ್ರನ್ನು ಹಿಂದಿಕ್ಕಿ 869 ಅಂಕಗಳೊಂದಿಗೆ ನಂಬರ್ 1 ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. 839 ಅಂಕ ಹೊಂದಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್ 2 ನೇ ಸ್ಥಾನದಲ್ಲಿದ್ದಾರೆ. ಬಾಬರ್ ಅಜಂ ಮೂರರಲ್ಲಿದ್ದಾರೆ.