ಕರ್ನಾಟಕ

karnataka

ETV Bharat / sports

ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ತಂದೆ ತ್ರಿಲೋಕಚಂದ್​ ರೈನಾ ವಿಧಿವಶ - ಭಾರತದ ಮಾಜಿ ಕ್ರಿಕೆಟಿಗ ರೈನಾ

ಕ್ಯಾನ್ಸ್​ರ್​ನಿಂದ ಬಳಲುತ್ತಿದ್ದ ಸುರೇಶ್​ ರೈನಾ ತಂದೆ ಫೆಬ್ರವರಿ 6ರಂದು ತಮ್ಮ ಘಾಜಿಯಾಬಾದ್​ನ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ . ತ್ರಿಲೋಕಚಂದ್​ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಬಾಂಬ್ ತಯಾರಿಸುವ ಪಾಂಡಿತ್ಯ ಹೊಂದಿದ್ದರು ಎನ್ನಲಾಗಿದೆ.

Suresh Raina's father dies after losing battle with cancer
ಸುರೇಶ್ ರೈನಾ ತಂದೆ ನಿಧನ

By

Published : Feb 6, 2022, 3:42 PM IST

ನವದೆಹಲಿ: ಭಾರತ ತಂಡದ ಮಾಜಿ ಆಲ್​ರೌಂಡರ್​ ಸುರೇಶ್​ ರೈನಾ ಅವರ ತಂದೆ ತ್ರಿಲೋಕಚಂದ್​ ರೈನಾ ಭಾನುವಾರ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆಂದು ತಿಳಿಬಂದಿದೆ.

ಕ್ಯಾನ್ಸ್​ರ್​ನಿಂದ ಬಳಲುತ್ತಿದ್ದ ಸುರೇಶ್​ ರೈನಾ ತಂದೆ ಫೆಬ್ರವರಿ 6ರಂದು ತಮ್ಮ ಘಾಜಿಯಾಬಾದ್​ನ ಮನೆಯಲ್ಲಿ ನಿಧನರಾಗಿದ್ದಾರೆ. ತ್ರಿಲೋಕಚಂದ್​ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಬಾಂಬ್ ತಯಾರಿಸುವ ಪಾಂಡಿತ್ಯ ಹೊಂದಿದ್ದರು ಎನ್ನಲಾಗಿದೆ.

ರೈನಾ ತಂದೆಯ ಪೂರ್ವಜರು ಮೂಲತಃ ಜಮ್ಮು ಕಾಶ್ಮೀರದ ಮೂಲದವರು. 1990ರ ಕಾಶ್ಮೀರಿ ಪಂಡಿತರ ಹತ್ಯೆಯ ನಂತರ ತಮ್ಮ ಗ್ರಾಮ ರೈನಾವಾರಿಯನ್ನು ತ್ಯಜಿಸಿ ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯ ಮುರದಬಗರ್​ ಪಟ್ಟಣಕ್ಕೆ ವಲಸೆ ಬಂದಿದ್ದರು ಎನ್ನಲಾಗಿದೆ.

ಸುರೇಶ್ ರೈನಾ ತಂದೆಯ ನಿಧನಕ್ಕೆ ಮಾಜಿ ಕ್ರಿಕೆಟರ್​ ಹರ್ಭಜನ್​ ಸಿಂಗ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:Ind vs WI ODI: ಕೈಗೆ ಕಪ್ಪು ಬ್ಯಾಂಡ್​ ಕಟ್ಟಿಕೊಂಡು ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಲಿರುವ ರೋಹಿತ್ ಪಡೆ

ABOUT THE AUTHOR

...view details