ಮೀರತ್: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ಸಂಬಂಧಿಯೊಬ್ಬರಿಗೆ ತುರ್ತಾಗಿ ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆದರೆ ತಕ್ಷಣ ರೈನಾ ಟ್ವೀಟ್ಗೆ ಮನವಿಗೆ ಸ್ಪಂದಿಸಿದ, ಕೊರೊನಾ ಸಂಕಷ್ಟದಲ್ಲಿ ಸಾಮಾನ್ಯ ಜನತೆಯ ಪಾಲಿಗೆ ಹೀರೋ ಆಗಿರುವ ಬಹುಭಾಷಾ ನಟ ಸೋನು ಸೂದ್ ಆಕ್ಸಿಜನ್ ಸಿಲಿಂಡರ್ ತಲುಪಿಸಲು ಮುಂದೆ ಬಂದಿದ್ದಾರೆ. ಆದರೆ ಮೀರತ್ ಪೊಲೀಸರು ರೈನಾ ಮನವಿ ಮಾಡಿದ 10 ನಿಮಿಷಕ್ಕೆ ಸಿಲಿಂಡರ್ ತಲುಪಿಸಿ ಕಾರ್ಯಕ್ಷಮತೆ ತೋರಿದ್ದಾರೆ.
34 ವರ್ಷದ ಕ್ರಿಕೆಟಿಗ ಸುರೇಶ್ ರೈನಾ ಇಂದು 3:47ರ ಸಮಯದಲ್ಲಿ , ತಮ್ಮ 65 ವರ್ಷ ಸಂಬಂಧಿ ಶ್ವಾಸಕೋಶ ಮತ್ತು ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರರಿಗೆ ಟ್ಯಾಗ್ ಮಾಡಿದ್ದರು.