ಕರ್ನಾಟಕ

karnataka

ETV Bharat / sports

ಧೋನಿ ಭಾಯ್‌ ಮುಂದಿನ ವರ್ಷದ IPL ಆಡದಿದ್ದರೆ, ನಾನೂ ಆಡಲ್ಲ: ಸುರೇಶ್​​ ರೈನಾ - ಧೋನಿ ಬಗ್ಗೆ ರೈನಾ ಮಾತು

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡ್ತಿದ್ದಂತೆ, ರೈನಾ ಕೂಡ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಐಪಿಎಲ್​​ನಲ್ಲಿ ಆಡುತ್ತಿರುವ ರೈನಾ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Suresh Raina-Dhoni
Suresh Raina-Dhoni

By

Published : Jul 9, 2021, 11:01 PM IST

ಹೈದರಾಬಾದ್​: ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡ್ತಿದ್ದಂತೆ ನಿವೃತ್ತಿ ಪಡೆದುಕೊಂಡಿದ್ದ ಸುರೇಶ್​ ರೈನಾ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್​​ ಧೋನಿ ಈ ವರ್ಷದ ಐಪಿಎಲ್​ ಮುಕ್ತಾಯಗೊಳ್ಳುತ್ತಿದ್ದಂತೆ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಪ್ರತಿಯಾಗಿ ರೈನಾ ಕೂಡಾ ಐಪಿಎಲ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿವೊಂದಕ್ಕೆ ನೀಡಿದ ಸಂದರ್ಭದಲ್ಲಿ ಸುರೇಶ್​ ರೈನಾ ಈ ರೀತಿಯಾಗಿ ಹೇಳಿಕೊಂಡಿದ್ದು, ಇದೀಗ ಆಶ್ಚರ್ಯ ಮೂಡಿಸಿದೆ.

ರೈನಾ ಹೇಳಿದ್ದೇನು?ಧೋನಿ ನಿವೃತ್ತಿ ಪಡೆದುಕೊಳ್ಳುವವರೆಗೂ ಸಿಎಸ್​ಕೆ ಪರ ಆಡುತ್ತಾರೆ. ಒಂದು ವೇಳೆ ಈ ಸಲದ ಆವೃತ್ತಿಯಲ್ಲಿ ಸಿಎಸ್​ಕೆ ಗೆಲುವು ದಾಖಲು ಮಾಡಿದ್ರೆ, ಮುಂದಿನ ಆವೃತ್ತಿಯಲ್ಲೂ ಭಾಗಿಯಾಗುವಂತೆ ನಾನು ಧೋನಿ ಭಾಯ್​ ಬಳಿ ಮನವಿ ಮಾಡುತ್ತೇನೆ. ಆದರೆ ನನಗೆ ಇದೇ ಆವೃತ್ತಿ ಕೊನೆಯದಾಗಿರುತ್ತದೆ ಎಂದಿದ್ದಾರೆ. ಆದರೆ ಈ ವರ್ಷ ಮಾತ್ರ ಸಿಎಸ್​ಕೆ ಪರ ಆಡುತ್ತೇನೆ ಎಂದಿರುವ ರೈನಾ ಬರುವ ದಿನಗಳಲ್ಲಿ ಕ್ರಿಕೆಟ್​ನಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.

2008ರಿಂದಲೂ ನಾನು ಸಿಎಸ್​ಕೆ ಪರ ಆಡುತ್ತಿದ್ದು, ಧೋನಿ ಭಾಯ್​ ಮುಂದಿನ ಆವೃತ್ತಿಗೆ ಆಡದಿದ್ದರೆ ನಾನು ಕೂಡ ಆಡಲ್ಲ. ಆದರೆ ಈ ಸಲ ಸಿಎಸ್​​ಕೆ ಟ್ರೋಫಿ ಗೆದ್ದರೆ ಮುಂದಿನ ವರ್ಷವೂ ಆಡುವಂತೆ ಮನವಿ ಮಾಡುವೆ ಎಂದಿದ್ದಾರೆ. ಕೊರೊನಾ ವೈರಸ್​ ಕಾರಣ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ ಅರ್ಧಕ್ಕೆ ಮೊಟಕುಗೊಂಡಿದ್ದು, ಇದೀಗ ಉಳಿದ ಪಂದ್ಯಗಳು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿವೆ. ಸದ್ಯ ಚೆನ್ನೈ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ABOUT THE AUTHOR

...view details