ನವದೆಹಲಿ:ಭಾರತ ತಂಡದ ಯುವ ಭರವಸೆಯ ಕ್ರಿಕೆಟಿಗ ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 25 ರಂದು ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಶ್ರೀಶಾಂತ್ ರಿಷಬ್ ಪಂತ್ ಮನೆಗೆ ತೆರಳಿ ಭೇಟಿಯಾಗಿದ್ದಾರೆ. ಈ ಮೂವರು ಆಟಗಾರರು ರಿಷಬ್ ಪಂತ್ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಅಲ್ಲದೇ ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ.
ಈ ಮೂವರು ಆಟಗಾರರಲ್ಲದೆ ಪಂಜಾಬಿ ಗಾಯಕ ಗುರು ರಾಂಧವಾ ಕೂಡ ರಿಷಬ್ ಪಂತ್ ಅವರನ್ನು ಭೇಟಿ ಮಾಡಿದ್ದಾರೆ. ಗುರು ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಿಂದ ಪಂತ್ ಜೊತೆಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ ಪಂತ್ ಅವರನ್ನು ಭೇಟಿಯಾಗಿದ್ದರು. ಅವರು ಚಾಂಪಿಯನ್ ಮರಳಿ ಬರಲಿದ್ದಾರೆ ಎಂದು ಬರೆದುಕೊಂಡಿದ್ದರು.
2022ರ ಡಿಸೆಂಬರ್ 30 ರಂದು ಡೆಹಲಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ರಿಷಬ್ ಪಂತ್ ಗಾಯಗೊಂಡರು. ಹೊಡಿ ಬಡಿ ದಾಂಡಿಗ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಆದರೆ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ, ಸುರೇಶ್ ರೈನಾ, ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ಪಂತ್ ಮನೆಗೆ ತೆರಳಿ ಅವರೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದಾರೆ.
ಸುರೇಶ್ ರೈನಾ ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಭೇಟಿಯ ಬಗ್ಗೆ ಬರೆದುಕೊಂಡಿದ್ದಾರೆ. "ಭ್ರಾತೃತ್ವವೇ ಸರ್ವಸ್ವ ..ಕುಟುಂಬವೇ ನಮ್ಮ ಹೃದಯ ಇರುವಲ್ಲಿ..ನಮ್ಮ ಸಹೋದರನಿಗೆ ಹಾರೈಕೆ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಫಿನಿಕ್ಸ್ನಂತೆ ಮೇಲಕ್ಕೇರಲಿ ಎಂದು. ನಿಮ್ಮೊಂದಿಗೆ ನಾವು ಎಂದಿಗೂ ಇದ್ದೇವೆ ಸಹೋದರ" ಎಂದು ಬರೆದುಕೊಂಡಿದ್ದಾರೆ.